ತಮ್ಮಿಷ್ಟದ ಆಹಾರವನ್ನ ತಿನ್ನಬೇಕು ಅಂತಾ ಸಣ್ಣ ವಿಮಾನದಲ್ಲಿ ಹೊರಟ ವ್ಯಕ್ತಿಗಳಿಬ್ಬರು ಬಾರೀ ಬೆಲೆಯನ್ನೇ ತೆತ್ತಿದ್ದಾರೆ.
ಫ್ಲೋರಿಡಾದ ಇಬ್ಬರು ವ್ಯಕ್ತಿಗಳು ಖಾಸಗಿ ವಿಮಾನದಲ್ಲಿ ಪ್ರಸಿದ್ಧ ಟಾಕೋ ಸ್ಟಾಲ್ಗೆ ಭೇಟಿ ನೀಡುವವರಿದ್ದರು. 21 ವರ್ಷದ ಜೋಸ್ ಎಕಾರಿ ಎಂಬವರು ತನ್ನ ಸ್ನೇಹಿತ ಹಾಗೂ ಸಹ ಪೈಲಟ್ ಜೊತೆ ಟಮಿಯಾಮಿಯಿಂದ ಅರ್ಕಾಡಿಯಾಗೆ ಪ್ರಮಾಣ ಬೆಳೆಸಿದ್ದರು.
ಆದರೆ ಮಾರ್ಗ ಮಧ್ಯದಲ್ಲಿ ಸಣ್ಣ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪರಿಣಾಮವಾಗಿ ವಿಮಾನವು ಫ್ಲೋರಿಡಾದ ಹೆದ್ದಾರಿ ಸಮೀಪದಲ್ಲೇ ಇರುವ ಎವರ್ ಗ್ಲೇಡ್ಸ್ ಎಂಬಲ್ಲಿ ಪತನವಾಗಿದೆ. ಅದೃಷ್ಟವಶಾತ್ ಅವರಿಬ್ಬರು ವಿಮಾನದಿಂದ ಸೇಫ್ ಆಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
ನಾವು 2000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಇಂಜಿನ್ ವೈಫಲ್ಯವಾಗಿದೆ ಎಂಬ ವಿಚಾರ ನಮಗೆ ತಿಳಿಯಿತು. ನಾವು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದೆವು. ಇಂತಹ ಅಪಘಾತಗಳಲ್ಲಿ ಬದುಕುಳಿಯೋದು ತುಂಬಾನೇ ವಿರಳ. ನಾನು ನನ್ನ ತಾತನ ಬಗ್ಗೆ ಯೋಚಿಸುತ್ತಿದ್ದೆ. ಅವರ ಆಶೀರ್ವಾದವೇ ನನ್ನನ್ನ ಕಾಪಾಡಿದೆ ಎಂದು ಎಕಾರ್ರಿ ಹೇಳಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಮಿಯಾಮಿ ಅಗ್ನಿಶಾಮಕದಳ ಹೆಲಿಕಾಪ್ಟರ್ ಮೂಲಕ ಬಂದು ರಕ್ಷಣಾ ಕಾರ್ಯ ನಡೆಸಿದೆ.