ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..! 12-06-2021 10:42AM IST / No Comments / Posted In: Corona, Corona Virus News, Latest News, India, Live News ಕೊರೊನಾ ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ ಅನ್ನೋದು ಈಗಂತೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಹಾರಾಷ್ಟ್ರದ ನಾಸಿಕ್ನ ನಿವಾಸಿಯೊಬ್ಬರು ಕೊರೊನಾ ಲಸಿಕೆ ಪಡೆದ ಬಳಿಕ ವಿಚಿತ್ರ ಸೈಡ್ ಎಫೆಕ್ಟ್ ಒಂದನ್ನ ಅನುಭವಿಸಿದ್ದಾರಂತೆ..! ನಾಸಿಕ್ನ ಶಿವಾಜಿ ಚೌಕ್ ನಿವಾಸಿಯಾಗಿರುವ ಅರವಿಂದ್ ಸೋನಾರ್ ಎಂಬ ವೃದ್ಧ ಎರಡು ಡೋಸ್ ಕೊರೊನಾ ಲಸಿಕೆಯನ್ನ ಪಡೆದ ಬಳಿಕ ತಮ್ಮ ದೇಹ ಅಯಸ್ಕಾಂತದ ಗುಣವನ್ನ ಪಡೆದುಕೊಂಡಿದೆ ಎಂದು ಹೇಳ್ತಿದ್ದಾರೆ. ಸೋನಾರ್ರ ದೇಹಕ್ಕೆ ಕಬ್ಬಿಣದ ವಸ್ತುಗಳನ್ನ ಹಿಡಿದರೆ ಅದು ಅವರ ದೇಹಕ್ಕೆ ಅಂಟಿಕೊಳ್ಳುತ್ತಿದೆಯಂತೆ. ಅಲ್ಲದೇ ತಮ್ಮ ವಾದಕ್ಕೆ ಪುಷ್ಠಿ ನೀಡುವ ಸಲುವಾಗಿ ವಿಡಿಯೋವನ್ನ ಮಾಡಿರುವ ಸೋನಾರ್ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಸೋನಾರ್ರ ದೇಹಕ್ಕೆ ನಾಣ್ಯಗಳು, ಚಮಚಗಳು ಅಂಟಿಕೊಂಡಿರೋದನ್ನ ನೀವು ನೋಡಬಹುದಾಗಿದೆ. ಮೊದಲ ಬಾರಿಗೆ ಸೋನಾರ್ ದೇಹಕ್ಕೆ ಈ ರೀತಿ ಲೋಹಗಳು ಅಂಟಿಕೊಂಡಿದ್ದನ್ನ ನೋಡಿದ ಕುಟುಂಬಸ್ಥರು ಬೆವರಿನಿಂದ ಹೀಗೆ ಆಗ್ತಿರಬಹುದು ಎಂದೇ ಭಾವಿಸಿದ್ದರಂತೆ. ಆದರೆ ಸ್ನಾನ ಮಾಡಿ ಬಂದ ಬಳಿಕವೂ ಲೋಹವು ದೇಹವನ್ನ ಆಕರ್ಷಿಸ್ತಾ ಇರೋದನ್ನ ನೋಡಿ ಕಂಗಾಲಾಗಿದ್ದಾರೆ. ಈ ಬಗ್ಗೆ ನಾಸಿಕ್ ಮುನ್ಸಿಪಾಲ್ ಕಾರ್ಪೋರೇಷನ್ ತನಿಖೆಯನ್ನ ನಡೆಸುತ್ತಿದ್ದು ಸೋನಾರ್ ದೇಹದಲ್ಲಿ ಯಾಕೆ ಈ ರೀತಿಯ ಬದಲಾವಣೆ ಆಯ್ತು ಅನ್ನೋದರ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ. View this post on Instagram A post shared by Bol Bhidu (@bolbhidu)