ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಇಂದು ಮೇಜರ್ ಟ್ವಿಸ್ಟ್ ಸಿಗಲಿದೆ. ಎಸ್ಐಟಿ ಎದುರು ವಿಚಾರಣೆಗೆ ಶ್ರವಣ್ ಮತ್ತು ನರೇಶ್ ಇಂದು ಹಾಜರಾಗಲಿದ್ದು, ಸ್ಪೋಟಕ ಸಾಕ್ಷ್ಯವನ್ನು ಹೊತ್ತು ತರಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ನರೇಶ್ ಮತ್ತು ಶ್ರವಣ್ ಆರ್.ಟಿ. ನಗರದ ವಕೀಲರೊಂದಿಗೆ ಸಿಡಿ ಪ್ರಕರಣ, ಸಾಕ್ಷ್ಯ, ಎಸ್ಐಟಿ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನರೇಶ್ ಮತ್ತು ಶ್ರವಣ್ ಗೆ ಕೋರ್ಟ್ ಜಾಮೀನು ನೀಡಿದ್ದು, ಎಸ್ಐಟಿ ಅಧಿಕಾರಿಗಳ ಸೂಚನೆ ಮೇರೆಗೆ ಇಂದು ವಿಚಾರಣೆಗೆ ಹಾಜರಾಗಲಿದ್ದು, ಇಂದಿನ ಬೆಳವಣಿಗೆ ಸಿಡಿ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಬ್ಲಾಕ್ ಮೇಲ್ ಪ್ರಕರಣದ ಸ್ಫೋಟಕ ಮಾಹಿತಿ ಇವತ್ತು ಹೊರ ಬೀಳಲಿದೆ. ಸಿಡಿ ಪ್ರಕರಣದ ನರೇಶ್ ಮತ್ತು ಶ್ರವಣ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಸರಿಯಾದ ಉತ್ತರ ಕೊಡದಿದ್ದರೆ, ವಿಚಾರಣೆ, ತನಿಖೆಗೆ ಸಹಕರಿಸದಿದ್ದರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.