ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್ ಆದ ವಿದ್ಯಾರ್ಥಿನಿ..! 11-06-2021 8:14PM IST / No Comments / Posted In: Corona, Corona Virus News, Latest News, India ಕೋವಿಡ್ 19ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್ಡೌನ್ ಆದೇಶಗಳಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದು ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೇ ರೀತಿ ಕಳೆದೊಂದು ವರ್ಷದಿಂದ ಆದಾಯದ ಮೂಲವಿಲ್ಲದೇ ಕಂಗೆಟ್ಟಿದ್ದ ಓಡಿಶಾ ಮೂಲದ ಕುಟುಂಬವೊಂದರಲ್ಲಿ ಯುವತಿಯೊಬ್ಬಳು ಜೊಮೆಟೋ ಡೆಲಿವರಿ ಪಾರ್ಟ್ನರ್ ಆಗಿ ಕೆಲಸಕ್ಕೆ ಸೇರಿದ್ದು, ಈ ಮೂಲಕ ತನ್ನ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಹಣ ಹೊಂದಿಸುತ್ತಿದ್ದಾಳೆ. ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ವಿಷ್ಣುಪ್ರಿಯಾ ತಂದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಒಪ್ಪೊತ್ತಿನ ಊಟಕ್ಕೂ ಕಷ್ಟ ಉಂಟಾದ ಸಂದರ್ಭದಲ್ಲಿ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯವಳಾದ ವಿಷ್ಣುಪ್ರಿಯಾ ಜೊಮ್ಯಾಟೋದಲ್ಲಿ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ. ನಾನು ಮಕ್ಕಳಿಗೆ ಟ್ಯೂಷನ್ ಮಾಡಿ ಹಣವನ್ನ ಸಂಪಾದಿಸುತ್ತಿದ್ದೆ. ಆದರೆ ಕೊರೊನಾದಿಂದಾಗಿ ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಾಗಿ ನಾನು ಜೊಮ್ಯಾಟೋದಲ್ಲಿ ಕೆಲಸಕ್ಕೆ ಸೇರಿದ್ದೇನೆ. ಆನ್ಲೈನ್ ತರಗತಿಗಳ ಜೊತೆಯಲ್ಲಿ ಈ ಕೆಲಸವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದೇನೆ ಎಂದು ವಿಷ್ಣುಪ್ರಿಯಾ ಹೇಳಿದ್ದಾಳೆ. Odisha: Bishnupriya Swain, a student in Cuttack picked food delivery work after her father lost job amid pandemic "I was taking tuitions.During COVID students weren't coming to class. We were facing financial issues. I joined Zomato to support my education&family,"she said y'day pic.twitter.com/TGfBPZDvZm — ANI (@ANI) June 10, 2021