ಮಹತ್ವದ ದಾಖಲೆಗಳನ್ನ ಯಾರಿಗಾದರೂ ಇ ಮೇಲ್ ಮಾಡುವಾಗ ಕೊಂಚ ಜಾಗರೂಕರಾಗಿ ಇರೋದು ಒಳಿತು. ಏಕೆಂದರೆ ಕೊಂಚ ಯಾಮಾರಿದ್ರೂ ಗೌಪ್ಯ ಮಾಹಿತಿ ಬೇರೆಯವರ ಇ ಮೇಲ್ ಹೋಗುವ ಸಾಧ್ಯತೆ ಇರುತ್ತದೆ. ಇದೇ ರೀತಿಯ ಘಟನೆಯೊಂದರಲ್ಲಿ ಕಂಪನಿಯೊಂದು ತನ್ನ ಗ್ರಾಹಕರ ಹೆಸರು, ವಿಳಾಸ, ಮೇಲ್ ಅಡ್ರೆಸ್ ಸೇರಿದಂತೆ ಎಲ್ಲಾ ಮಾಹಿತಿಯನ್ನ ತಪ್ಪಾಗಿ ತನ್ನ ಇನ್ನೊಂದು ಗ್ರಾಹಕನಿಗೆ ಕಳುಹಿಸಿಬಿಟ್ಟಿದೆ.
ಎಲೆಕ್ಟ್ರಿಕ್ ಸ್ಕೇಟ್ಬೋರ್ಡ್ ಕಂಪನಿಯು ಗ್ರಾಹಕ ಖರೀದಿ ಮಾಡಿದ ಸ್ಕೇಟ್ ಬೋರ್ಡ್ ವಾರಂಟಿ ಕಾರ್ಡ್ ನೋಂದಣಿ ಮಾಡಲು ಇ ಮೇಲ್ ಮಾಡುವ ಬದಲು ಕಾಪಿ ಪೇಸ್ಟ್ ಮಾಡಿದ ಪರಿಣಾಮ ಕಂಪನಿಯ ಎಲ್ಲಾ ಗ್ರಾಹಕರ ಸಂಪೂರ್ಣ ಮಾಹಿತಿ ಆ ಗ್ರಾಹಕನಿಗೆ ಕಳುಹಿಸಿದೆ.
ಗ್ರಾಹಕನಿಗೆ ಕಂಪನಿಯು ಕಳುಹಿಸಿದ ವರದಿಯಲ್ಲಿ 2014 ರಿಂದ ಕಳೆದ ವಾರದವರೆಗೆ ಮಾಡಲಾದ ಒಟ್ಟು 50 ಸಾವಿರ ಗ್ರಾಹಕರ ಮಾಹಿತಿಯು ಇದೆ. ಎಲೆಕ್ಟ್ರಿಕ್ ಸ್ಕೇಟ್ಬೋರ್ಡ್ ಕಂಪನಿಯು ಈ ಪ್ರಮಾದವನ್ನ ಎಸಗಿದೆ. ಹಾಗೂ ಸಿಬ್ಬಂದಿ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಗ್ರಾಹಕನಿಗೆ ಕಳುಹಿಸಲಾದ ಲಿಂಕ್ನ್ನು ಕಂಪನಿ ಡಿಲೀಟ್ ಮಾಡಿದೆ.