ಮೈಸೂರು: ಮಗು ಹುಟ್ಟಿದ ಮೂರೇ ದಿನಕ್ಕೆ ಹೆತ್ತ ಕಂದಮ್ಮನನ್ನು ಮಾರಾಟ ಮಾಡಿದ್ದ ಮಹಿಳೆ ಈಗ 7 ತಿಂಗಳ ಬಳಿಕ ತನ್ನ ಮಗುವನ್ನು ವಾಪಸ್ ನೀಡುವಂತೆ ಮನೆ ಮುಂದೆ ಗಲಾಟೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ.
ಮೂರು ದಿನಗಳ ಗಂಡು ಮಗುವನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದ ಪ್ರಕರಣ 7 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಬೆಂಗಳೂರಿನ ರೋಜಾ ಎಂಬ ಮಹಿಳೆ ತನಗೆ ಗಂಡು ಮಗು ಬೇಡವೆಂದು ಮೂರು ದಿನದ ಮಗುವನ್ನು ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನ ಅಂಬರೀಶ್ ಹಾಗೂ ಮಧುಮಾಲತಿ ದಂಪತಿಗೆ ಮಾರಾಟ ಮಾಡಿದ್ದಳು. ಕಳೆದ 7 ತಿಂಗಳಿಂದ ಮಗು ದಂಪತಿ ಆರೈಕೆಯಲ್ಲಿ ಬೆಳೆಯುತ್ತಿದ್ದು, ಇದೀಗ ಮಗು ಮಾರಾಟ ಮಾಡಿದ್ದ ಮಹಿಳೆ ರೋಜಾ ದಂಪತಿ ಮನೆಗೆ ಬಂದು ಮಗು ವಾಪಸ್ ಕೊಡುವಂತೆ ಗಲಾಟೆ ನಡೆಸಿದ್ದಾಳೆ.
ಹೇರ್ ಆಯಿಲ್ ಮಾರಾಟ ಮಾಡುವಾಗ ಆನ್ ಲೈನ್ ನಲ್ಲಿ ರೋಜಾ ಎಂಬ ಮಹಿಳೆ ಪರಿಚಯವಾಗಿದ್ದಳು. ತನಗೆ ಗಂಡು ಮಗು ಬೇಡ ಎಂದು ತನ್ನ ಮಗುವನ್ನೇ 7 ತಿಂಗಳ ಹಿಂದೆ ಅಂಬರೀಶ್ ದಂಪತಿಗೆ ಮಾರಿದ್ದಳು. ಇದೀಗ ಈ ಪ್ರಕರಣ ಹೆಚ್.ಡಿ.ಕೋಟೆ ಠಾಣೆ ಮೆಟ್ಟಿಲೇರಿದೆ.