ಬೆಂಗಳೂರು: ಹಣ ಪಡೆದು ವ್ಯಾಕ್ಸಿನ್ ನೀಡಲಾಗುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಪಡೆದು ಲಸಿಕೆ ಕೇಂದ್ರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಆರೋಗ್ಯ ಸಹಾಯಕಿಯೊಬ್ಬರು ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ ನೆಲಮಂಗಲದ ಅರಿಶಿನಕುಂಟೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ವ್ಯಾಕ್ಸಿನ್ ಕೇಂದ್ರದಲ್ಲಿ ಆರೋಗ್ಯ ಸಹಾಯಕಿ ಗಾಯತ್ರಿ 400-500 ರೂಪಾಯಿ ಪಡೆದು ವ್ಯಾಕ್ಸಿನ್ ಹಾಕುತ್ತಿದ್ದರು. ಈ ಬಗ್ಗೆ ದೂರು ಕೇಳಿಬಂದ ಬೆನ್ನಲ್ಲೇ ತಹಶೀಲ್ದಾರ್ ಮಂಜುನಾಥ್ ಹಾಗೂ ಅಧಿಕಾರಿಗಳ ತಂಡ ಲಸಿಕಾ ಕೇಂದ್ರದ ಮೇಲೆ ದಾಳಿ ನಡೆಸಿದೆ. ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಆರೋಗ್ಯ ಸಹಾಯಕಿ ತನ್ನ ವಿರುದ್ಧ ಕ್ರಮ ಕೈಗೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಮನುಷ್ಯನ ಮಲದಲ್ಲಿ ಬರೋಬ್ಬರಿ 1000 ವರ್ಷ ಹಿಂದಿನ ಕೋಳಿ ಮೊಟ್ಟೆ ಪತ್ತೆ…!
ಅಲ್ಲದೇ ತಾನು ಹಣ ಪಡೆದು ಲಸಿಕೆ ಹಾಕಿದ್ದು ನಿಜ. ಇನ್ನೊಮ್ಮೆ ತನ್ನಿಂದ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ. ಆದರೆ ಈಗ ತನ್ನ ವಿರುದ್ಧ ಕ್ರಮ ಕೈಗೊಂಡರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳ ಮುಂದೆ ಗೋಗರೆದಿದ್ದಾರೆ. ಆರೋಗ್ಯ ಸಹಾಯಕಿ ಬೆದರಿಕೆಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ.