ಆರ್ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದ್ರೆ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ನೀಡಿವೆ. ಬ್ಯಾಂಕ್ ಆಫ್ ಬರೋಡಾ ಸಾಲದ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಎಂಸಿಎಲ್ಆರ್ ಶೇಕಡಾ 0.05 ರಷ್ಟು ಕಡಿತಗೊಂಡಿದೆ.
ಬ್ಯಾಂಕ್ ಆಫ್ ಬರೋಡಾ ಜೂನ್ 1 ರಿಂದ ಸಾಲದ ದರವನ್ನು ಕಡಿತಗೊಳಿಸಿದೆ. ಈ ಕಡಿತದ ನಂತರ ಬ್ಯಾಂಕ್ ಆಫ್ ಬರೋಡಾದ 1 ವರ್ಷದ ಎಂಸಿಎಲ್ಆರ್ ಶೇಕಡಾ 7.35 ರಷ್ಟಾಗಿದೆ. ಪಿಎನ್ಬಿ 6 ತಿಂಗಳು ಹಾಗೂ ಮೂರು ತಿಂಗಳ ಎಂಸಿಎಲ್ ಆರ್ ದರವನ್ನು ಶೇಕಡಾ 0.10ರಷ್ಟು ಇಳಿಸಲಾಗಿದೆ. ಇದ್ರ ನಂತ್ರ ಬಡ್ಡಿ ದರ ಶೇಕಡಾ 7ರಿಂದ ಶೇಕಡಾ 6.80ರಷ್ಟಾಗಿದೆ.
ಕೆನರಾ ಬ್ಯಾಂಕ್, ಎಂಸಿಎಲ್ಆರ್ ಮತ್ತು ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ ಗಳ ಮಾರ್ಜಿನಲ್ ವೆಚ್ಚದಲ್ಲಿ ಬದಲಾವಣೆ ಮಾಡಿದೆ. ಹೊಸ ದರಗಳು ಮೇ 21ರಿಂದ ಜಾರಿಗೆ ಬಂದಿವೆ. ಕೆನರಾ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಾಲ ನೀಡುತ್ತಿದೆ. ಕೆನರಾ ಬ್ಯಾಂಕ್ ಎಂಸಿಎಲ್ಆರ್ ಆಧಾರಿತ ಸಾಲವನ್ನು ಶೇಕಡಾ 7.35 ಕ್ಕೆ ನೀಡುತ್ತಿದೆ.