alex Certify ATM ಗ್ರಾಹಕರೇ ಗಮನಿಸಿ: ಬದಲಾಗಲಿದೆ ಈ ಎಲ್ಲ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ಗ್ರಾಹಕರೇ ಗಮನಿಸಿ: ಬದಲಾಗಲಿದೆ ಈ ಎಲ್ಲ ನಿಯಮ

ಭಾರತೀಯ ರಿಸರ್ವ್​ ಬ್ಯಾಂಕ್​ ಎಟಿಎಂ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನ ಘೋಷಣೆ ಮಾಡಿದೆ. ಎಟಿಎಂ ನಿಯಮಾವಳಿಗಳಲ್ಲಿ ರಿಸರ್ವ್ ಬ್ಯಾಂಕ್​ ತಂದಿರುವ ಈ ಮಹತ್ವದ ಬದಲಾವಣೆಗಳು ಗ್ರಾಹಕರ ಜೇಬಿಗೆ ಇನ್ನಷ್ಟು ಹೊರೆ ನೀಡಲಿದೆ.

1. ಮುಂದಿನ ವರ್ಷದಿಂದ ಮಾಸಿಕ ಮಿತಿಯನ್ನ ಮೀರಿ ಎಟಿಎಂಗಳಲ್ಲಿ ನಡೆಸುವ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳಿಗೆ ಶುಲ್ಕ ಹೆಚ್ಚಳ ಮಾಡಲು ಬ್ಯಾಂಕ್​ಗಳಿಗೆ ಆರ್​ಬಿಐ ಅನುಮತಿ ನೀದಿದೆ. ಈ ಮೂಲಕ ಪ್ರತಿ ವ್ಯವಹಾರಕ್ಕೆ 21 ರೂಪಾಯಿವರೆಗೆ ಶುಲ್ಕ ಏರಿಕೆ ಮಾಡಲು ಬ್ಯಾಂಕುಗಳಿಗೆ ಅನುಮತಿ ಸಿಕ್ಕಂತಾಗಿದೆ. ಮುಂದಿನ ವರ್ಷ ಜನವರಿ 1ನೇ ತಾರೀಖಿನಿಂದ ಪರಿಷ್ಕೃತ ದರವು ಜಾರಿಗೆ ಬರಲಿದೆ.

2. ಗ್ರಾಹಕರು ಬ್ಯಾಂಕುಗಳಲ್ಲಿ ನೀಡಲಾದ ಎಟಿಎಂ ವ್ಯವಹಾರದ ಮಾಸಿಕ ಮಿತಿಯನ್ನ ಮೀರಿದರೆ ಈ ಹಿಂದೆ ಪ್ರತಿ ವ್ಯವಹಾರಕ್ಕೆ 20 ರೂಪಾಯಿ ಪಾವತಿ ಮಾಡಬೇಕಿದ್ದ ಗ್ರಾಹಕರು ಇನ್ಮುಂದೆ 21 ರೂಪಾಯಿಗಳನ್ನ ಪಾವತಿ ಮಾಡಬೇಕು. 2022 ಜನವರಿ 1ನೇ ತಾರೀಕಿನಿಂದ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ.

3. ಗ್ರಾಹಕರಿಗೆ ಪ್ರತಿ ತಿಂಗಳು ತಮ್ಮ ಖಾತೆ ಇರುವ ಬ್ಯಾಂಕುಗಳ ಎಟಿಎಂನಲ್ಲಿ 5 ಉಚಿತ ವ್ಯವಹಾರಗಳನ್ನ ನಡೆಸಲು ಅವಕಾಶವಿದೆ.

4. ಬ್ಯಾಂಕೇತರ ಎಟಿಎಂಗಳಲ್ಲೂ ಗ್ರಾಹಕರಿಗೆ ಉಚಿತ ವ್ಯವಹಾರಕ್ಕೆ ಅವಕಾಶವಿದೆ. ಇದು ಮೆಟ್ರೋ ಸೆಂಟರ್​ಗಳಲ್ಲಿ ಮೂರು ಹಾಗೂ ಮೆಟ್ರೋ ಕೇಂದ್ರಗಳಲ್ಲದ ಕಡೆಗಳಲ್ಲಿ ಬೇರೆ ಎಟಿಎಂ ಕೇಂದ್ರಗಳಲ್ಲಿ ಪ್ರತಿ ತಿಂಗಳಿಗೆ 5 ಬಾರಿ ಉಚಿತವಾಗಿ ವ್ಯವಹಾರ ನಡೆಸಬಹುದಾಗಿದೆ.

5. ಇನ್ನೊಂದು ಮಹತ್ವದ ಘೋಷಣೆಯಲ್ಲಿ ಆರ್​ಬಿಐ ಪ್ರತಿ ಬ್ಯಾಂಕುಗಳಲ್ಲಿ ಪ್ರತಿ ವ್ಯವಹಾರಕ್ಕೆ ವಿಧಿಸಲಾಗುತ್ತಿದ್ದ ಇಂಟರ್​ಚಾರ್ಜ್​ ಶುಲ್ಕವನ್ನ 15 ರೂಪಾಯಿಗಳಿಂದ 17 ರೂಪಾಯಿಗೆ ಏರಿಕೆ ಮಾಡಿದೆ. ಹಾಗೂ ಹಣಕಾಸೇತರ ವ್ಯವಹಾರಗಳಿಗೆ ಶುಲ್ಕವು 5 ರೂಪಾಯಿಯಿಂದ 6 ರೂಪಾಯಿಗೆ ಏರಿಕೆ ಕಂಡಿದೆ. ಆಗಸ್ಟ್​ 1ನೇ ತಾರೀಖಿನಿಂದ ಇದು ಜಾರಿಗೆ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...