ಕೊರೊನಾ ಲಸಿಕೆ ಬಗ್ಗೆ ಈಗ್ಲೂ ವದಂತಿಗಳಿವೆ. ಕೊರೊನಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡುತ್ತೆ ಎಂಬ ವದಂತಿಯಿದೆ. ಈ ವದಂತಿ ನಂಬಿ ಲಸಿಕೆ ಹಾಕಿಕೊಳ್ಳದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಲ್ಟರ್ ಮತ್ತು ಎಲಿಜಾ ಹಾಲ್ ಸಂಸ್ಥೆಯ ರೆನ್ ಪಾಸ್ರಿಚಾ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಪ್ರೊಫೆಸರ್ ಪಾಲ್ ಮೊನಾಗಲ್, ಲಸಿಕೆ ಪಡೆಯುವುದು ಎಲ್ಲ ರೀತಿಯಿಂದಲೂ ಪ್ರಯೋಜನಕಾರಿ ಎಂದಿದ್ದಾರೆ. ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ತೆಳುವಾಗುವ ಸಮಸ್ಯೆ ಎದುರಿಸುವ ಜನರು ಅಸ್ಟ್ರಾಜೆನೆಕಾ ಲಸಿಕೆ ತೆಗೆದುಕೊಳ್ಳುವುದು ಸರಿಯೇ ಎಂದು ಪ್ರಶ್ನೆ ಮಾಡ್ತಾರೆ. ಇದಕ್ಕೆ ನಾವು ಹೌದು ಎಂದೇ ಉತ್ತರ ನೀಡುತ್ತೇವೆಂದು ಅವರು ಹೇಳಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆ ತೆಗೆದುಕೊಂಡ ನಂತ್ರ ಕಾಡ್ತಿರುವ ರಕ್ತ ಹೆಪ್ಪುಗಟ್ಟುವಿಕೆಗೆ ರಕ್ತನಾಳಗಳ ಥ್ರಂಬೋಸಿಸ್ ಅಥವಾ ಪಲ್ಮನರಿ ಎಂಬಾಲಿಸಮ್, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆಗಿಂತ ಭಿನ್ನವಾಗಿದೆ ಎಂದವರು ಹೇಳಿದ್ದಾರೆ.
ರಕ್ತ ಹೆಪ್ಪುಗಟ್ಟುವಿಕೆ ಭಯದಲ್ಲಿ ಎಂದೂ ಲಸಿಕೆ ಪಡೆಯಲು ಹಿಂಜರಿಯಬೇಡಿ. ಇದ್ರಿಂದ ಅಪಾಯ ಹೆಚ್ಚಾಗುತ್ತದೆ. ಕೊರೊನಾ ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಹಾಗಾಗಿ ಶೀಘ್ರವೇ ಲಸಿಕೆ ತೆಗೆದುಕೊಳ್ಳಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.