ನವದೆಹಲಿ: ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA) ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ತಿರಸ್ಕರಿಸಿದೆ.
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA)ನ ಲಸಿಕೆಯ ತುರ್ತು ಬಳಕೆ ಅಧಿಕಾರ (ಇಯುಎ) ಸಮಿತಿ ಭಾರತ್ ಬಯೋಟೆಕ್ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅಮೆರಿಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಗಾಗಿ ಭಾರತ್ ಬಯೋಟೆಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾದ ಒಕುಜೆನ್, ಲಸಿಕೆಯ ಸಂಪೂರ್ಣ ಅನುಮೋದನೆಯನ್ನು ಪಡೆಯುವ ಪ್ರಯತ್ನದಲ್ಲಿದೆ ಎಂದು ಹೇಳಲಾಗಿದೆ.
FDA ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದು, ಸಂಪೂರ್ಣ ಅನುಮೋದನೆಗಾಗಿ ಹೆಚ್ಚಿನ ಮಾಹಿತಿ ಮತ್ತು ಡೇಟಾವನ್ನು ಕೋರಲಾಗಿದೆ.
ಒಕುಜೆನ್ ಸಿಇಒ ಡಾ.ಶಂಕರ್ ಮುಸುನೂರಿ ಅವರು, ಲಸಿಕೆ ತುರ್ತು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಜೈವಿಕ ಪರವಾನಿಗೆ ಅರ್ಜಿ ಮಾರ್ಗಸೂಚಿ ಅನುಸರಿಸಲು FDA ತಿಳಿಸಿದ್ದು ಸಮಯ ವಿಸ್ತರಿಸಿದರೆ ಅಮೆರಿಕಕ್ಕೆ ಲಸಿಕೆ ತರಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಒಕುಜೆನ್ ಈ ವರ್ಷದ ಮಾರ್ಚ್ ನಲ್ಲಿ ಕೊವಾಕ್ಸಿನ್ ಪ್ರಯೋಗದ ಭಾಗಶಃ ಡೇಟಾವನ್ನು ಸಲ್ಲಿಸಿದ್ದು, ನಂತರ ಯುಎಸ್ FDA ತುರ್ತು ಬಳಕೆ ಪ್ರಸ್ತಾವ ತಿರಸ್ಕರಿಸಿದೆ. ಕಳೆದ ತಿಂಗಳ ಆರಂಭದಲ್ಲಿ, ಆರೋಗ್ಯ ನಿಯಂತ್ರಕ ಕೋವಿಡ್ ಲಸಿಕೆ ಅನುಮೋದನೆಗಾಗಿನ ತನ್ನ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೊಸ ಅಪ್ಲಿಕೇಶನ್‌ಗಳಿಗೆ ಇನ್ನು ಮುಂದೆ ತುರ್ತು ಅನುಮತಿಯನ್ನು ನೀಡುವುದಿಲ್ಲ ಎಂದು ಹೇಳಿದೆ. ಅದರ ಹೊರತಾಗಿಯೂ ಒಕುಜೆನ್ ಹೂಡಿಕೆದಾರರಿಗೆ ನೀಡಿದ ಹೇಳಿಕೆಯಲ್ಲಿ ಕಂಪನಿಯು ಜೂನ್‌ನಲ್ಲಿ ತನ್ನ ಇಯುಎ ಸಲ್ಲಿಸಲು ಅರ್ಹತೆ ಪಡೆಯಲಿದೆ ಎಂದು ವಿಶ್ವಾಸ ಹೊಂದಿದೆ.