ತನ್ನ ಮದುವೆಯೇ ಅಸಿಂಧು ಎಂದು ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಕರೆದ ಬಳಿಕ, ಆಕೆಯ ಹಾಲಿ ಪತಿ ನಿಖಿಲ್ ಜೈನ್ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ತಮ್ಮಿಬ್ಬರ ಮದುವೆಯನ್ನು ನೋಂದಾಯಿಸಿಕೊಳ್ಳಲು ಅದೆಷ್ಟೇ ಕೇಳಿಕೊಂಡರೂ ನುಸ್ರತ್ ತನ್ನ ಮಾತು ಕೇಳಲಿಲ್ಲ ಎಂದು ನಿಖಿಲ್ ತಿಳಿಸಿದ್ದಾರೆ.
ಯಾವಾಗಲಾದರೂ ಫ್ರೆಂಡ್ಸ್ ಜೊತೆ ಒಮ್ಮೆ ಈ ʼಜಾಗʼಗಳಿಗೆ ಹೋಗಿ ಬನ್ನಿ
ನಿಖಿಲ್ ಈ ಸಂಬಂಧ ಸ್ಪಷ್ಟಪಡಿಸಿದ ವಿಚಾರಗಳು ಇಂತಿವೆ:
“ಇತ್ತೀಚೆಗೆ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಮಾಡಲಾದ ಆಪಾದನೆಗಳಿಂದ ಮನನೊಂದಿರುವ ನನಗೆ, ಕೆಲವೊಂದು ಸಂಗತಿಗಳನ್ನು ಬಹಿರಂಗಪಡಿಸಬೇಕಾದ ಅಗತ್ಯ ಬಂದಿದೆ.
1. ನುಸ್ರತ್ ಮೇಲಿನ ಪ್ರೇಮದಿಂದಾಗಿ ಆಕೆಯನ್ನು ಮದುವೆ ಮಾಡಿಕೊಳ್ಳಲು ನಾನು ಮಾಡಿದ ಪ್ರಪೋಸ್‌ಗೆ ಆಕೆ ಖುಷಿಯಿಂದಲೇ ಒಪ್ಪಿದ ಹಿನ್ನೆಲೆಯಲ್ಲಿ, 2019ರ ಜೂನ್‌ನಲ್ಲಿ ಟರ್ಕಿಯ ಬಡ್ರೋಮ್‌ನಲ್ಲಿ ಮದುವೆ ಆಗಿದ್ದು, ಕೋಲ್ಕತ್ತಾದಲ್ಲಿ ರಿಸೆಪ್ಷನ್ ಸಹ ನೆರವೇರಿದೆ.
2. ಗಂಡ-ಹೆಂಡತಿಯಾಗಿ ನಾವಿಬ್ಬರೂ ಜೊತೆಯಾಗಿ ಬದುಕಿದ್ದು, ಸಮಾಜದಲ್ಲಿ ದಂಪತಿಗಳೆಂದು ಪರಿಚಯಿಸಿಕೊಂಡಿದ್ದೇವೆ. ನನ್ನೆಲ್ಲಾ ಸಮಯ ಹಾಗೂ ಸಂಪನ್ಮೂಲಗಳನ್ನೂ ನಾನು ಒಬ್ಬ ನಿಷ್ಠಾವಂತ ಪತಿಯಾಗಿ ಬಳಸಿಕೊಂಡಿದ್ದೇನೆ. ನಾನು ಆಕೆಗೆ ಏನೆಲ್ಲಾ ಮಾಡಿದ್ದೇನೆ ಎಂದು ಸ್ನೇಹಿತರು, ಕುಟುಂಬಸ್ಥರು ಹಾಗೂ ನಮ್ಮ ಆಪ್ತರು ಕಂಡಿದ್ದಾರೆ. ಆಕೆಗೆ ನನ್ನ ಕಡೆಯಿಂದ ಇದ್ದ ಶರತ್ತುರಹಿತ ಬೆಂಬಲದ ಕುರಿತಂತೆ ಯಾವ ಅನುಮಾನವೂ ಇರಲಿಲ್ಲ. ಆದರೆ ಬಹಳ ಚಿಕ್ಕ ಅವಧಿಯಲ್ಲೇ ಆಕೆ ನನ್ನೆಡೆಗಿನ ನಿಲುವನ್ನೇ ಬದಲಿಸಿಕೊಂಡಿದ್ದಾಳೆ.
ದಿನ ಶುಭಕರವಾಗಿರಬೇಕೆಂದ್ರೆ ಬೆಳಿಗ್ಗೆ ಮಾಡಿ ಈ ಕೆಲಸ
3. ಆಗಸ್ಟ್ 2020ರಿಂದ ಚಿತ್ರವೊಂದರ ಶೂಟಿಂಗ್ ಆರಂಭಗೊಂಡಾಗಿನಿಂದ, ನನ್ನೆಡೆಗೆ ನನ್ನ ಪತ್ನಿಯ ವರ್ತನೆ ಬದಲಾಗುತ್ತಾ ಬಂದಿದ್ದು, ಇದಕ್ಕೆ ಕಾರಣಗಳು ಆಕೆಗೇ ಚೆನ್ನಾಗಿ ಗೊತ್ತಿರಬೇಕು.
4. ಜೊತೆಯಾಗಿ ಬದುಕಿದ್ದ ವೇಳೆ, ನಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳಲು ಆಕೆಯಲ್ಲಿ ಬಹಳಷ್ಟು ಬಾರಿ ಕೇಳಿಕೊಂಡಿದ್ದರೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದಾಳೆ.
5. ನವೆಂಬರ್ 5, 2020ರಲ್ಲಿ ಆಕೆ ತನ್ನ ಬ್ಯಾಗ್‌ಗಳು ಹಾಗೂ ತನ್ನ ಇತರೆ ವೈಯಕ್ತಿಕ ವಸ್ತುಗಳು, ದಾಖಲೆಗಳು, ಪತ್ರಗಳನ್ನು ತೆಗೆದುಕೊಂಡು ನನ್ನ ಫ್ಲಾಟ್ ಬಿಟ್ಟು ತನ್ನ ಬಾಲಿಂಗಂಜ್ ಫ್ಲಾಟ್‌ನಲ್ಲಿ ಇರಲು ಆರಂಭಿಸಿದ್ದಾಳೆ. ಇದಾದ ಬಳಿಕ ನಾವಿಬ್ಬರೂ ಜೊತೆಯಾಗಿ ಇರಲೇ ಇಲ್ಲ. ಆಕೆ ಸ್ಥಳಾಂತರಗೊಂಡ ಕೂಡಲೇ ಆಕೆಗೆ ಸೇರಿದ ಇತರೆ ವಸ್ತುಗಳನ್ನೂ ಸಹ ಕೂಡಲೇ ಕಳುಹಿಸಿಕೊಡಲಾಯಿತು.
6. ಆಕೆಯ ಸಲ್ಲಾಪಗಳ ಕುರಿತಂತೆ ಮಾಧ್ಯಮಗಳಲ್ಲಿ ನೋಡಿ ಮೋಸ ಹೋದೆ ಎಂದು ಅನಿಸಿತು. ಕೊನೆಯದಾಗಿ, ಮಾರ್ಚ್ 8, 2021ರಲ್ಲಿ ನಮ್ಮ ವಿವಾಹಬಂಧವನ್ನು ಅಂತ್ಯಗೊಳಿಸಲು ಕೋರಿ ಅಲಿಪುರದ ಕೋರ್ಟ್‌ನಲ್ಲಿ ಆಕೆಯ ವಿರುದ್ಧ ದಾವೆ ಹೂಡಿದೆ.
7. ವಿಚ್ಛೇದನದ ವಿಚಾರವು ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ, ನಾನು ಆಕೆಯ ವೈಯಕ್ತಿಕ ಬದುಕಿನ ಕುರಿತಂತೆ ಯಾವುದೇ ಹೇಳಿಕೆ ಕೊಡಲು ಮುಂದಾಗಲಿಲ್ಲ. ಆದರೆ ಇತ್ತೀಚೆಗೆ ಆಕೆಯ ಹೇಳಿಕೆಗಳು ನಾನು ಸಹ ಮುಂದೆ ಬಂದು ಮಾತನಾಡುವಂತೆ ಮಾಡಿವೆ.
8. ಮದುವೆಯಾದ ಬಳಿಕ, ಆಕೆಯ ಮೇಲಿದ್ದ ಗೃಹ ಸಾಲದ ಹೊರೆ ಇಳಿಸಿದೆ. ಇದಕ್ಕಾಗಿ ನನ್ನ ಖಾತೆಯಿಂದ ಆಕೆಯ ಖಾತೆಗೆ ದುಡ್ಡನ್ನೂ ವರ್ಗಾವಣೆ ಮಾಡಿದ್ದೆ. ಆಕೆಯ ಖಾತೆಯಿಂದ ನನ್ನ ಅಥವಾ ನನ್ನ ಕುಟುಂಬಸ್ಥರ ಖಾತೆಗಳಿಗೆ ಯಾವುದಾದರೂ ದುಡ್ಡು ವರ್ಗಾವಣೆಯಾಗಿದ್ದರೆ ಅದು ಆಕೆ ನನ್ನ ಸಾಲವನ್ನು ಮರುಪಾವತಿ ಮಾಡಿದ ಕಂತುಗಳು. ದೊಡ್ಡ ಮೊತ್ತವೊಂದನ್ನು ಆಕೆ ಇನ್ನೂ ಪಾವತಿ ಮಾಡಬೇಕಿದೆ. ಆಕೆ ಮಾಡುತ್ತಿರುವ ಆಪಾದನೆಗಳೆಲ್ಲಾ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿವೆ. ಇದಕ್ಕೆ ಯಾವುದೇ ಸಾಕ್ಷ್ಯಗಳನ್ನು ಹೊಸದಾಗಿ ಹುಡುಕಬೇಕಿಲ್ಲ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳ ರೂಪದಲ್ಲಿ ಬೇಕಾದಷ್ಟು ಸಾಕ್ಷ್ಯಗಳಿವೆ. ನನ್ನ ಕುಟುಂಬ ಆಕೆಯನ್ನ ಮಗಳ ರೀತಿಯಲ್ಲಿ ಸ್ವೀಕರಿಸಿತ್ತು, ಆದರೆ ಇಂದು ಹೀಗೆ ಆಗುತ್ತೆಂದು ಊಹಿಸಿರಲಿಲ್ಲ.
9. ಇಂಥ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡದಂತೆ ಮಾಧ್ಯಮಗಳಿಗೆ ಕೋರುತ್ತೇನೆ.
ನುಸ್ರತ್ ಜಹಾನ್ ಕೊಟ್ಟ ಹೇಳಿದೆ:
ನಿಖಿಲ್ ಜೊತೆಗೆ ತನ್ನ ಮದುವೆಯು ಟರ್ಕಿಯ ಕಾನೂನಿನ ಪ್ರಕಾರ ನಡೆದಿದ್ದು, ಭಾರತದಲ್ಲಿ ಸಮ್ಮತವಿಲ್ಲ ಎಂದಿದ್ದಾರೆ.
ತನ್ನ ಒಡವೆಗಳು ಹಾಗೂ ಇತರೆ ವಸ್ತುಗಳನ್ನು ಅಕ್ರಮವಾಗಿ ಅವರೇ ಇಟ್ಟುಕೊಂಡಿದ್ದರು ಎಂದು ಆಪಾದನೆ ಮಾಡಿರುವ ನುಸ್ರತ್, ಅನೇಕ ಖಾತೆಗಳಲ್ಲಿದ್ದ ತನ್ನ ದುಡ್ಡನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿಖಿಲ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಆಪಾದನೆ ಮಾಡಿದ್ದಾರೆ.
ಕೆಲ ದಿನಗಳ ಕಾಲ ಡೇಟಿಂಗ್ ಮಾಡಿದ ಬಳಿಕ ನುಸ್ರತ್ ಹಾಗೂ ನಿಖಿಲ್ 2019ರ ಜೂನ್‌ನಲ್ಲಿ ಮದುವೆ ಮಾಡಿಕೊಂಡಿದ್ದರು.