ನವದೆಹಲಿ: ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 5 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬೇಕಿಲ್ಲ. ರೆಮ್ ಡೆಸಿವಿರ್ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ವೈದ್ಯರ ಕಟ್ಟುನಿಟ್ಟಿನ ನಿಗಾದಲ್ಲಿರುವ ಮಕ್ಕಳಿಗೆ ಸ್ಟಿರಾಯ್ಡ್ ಬಳಕೆಗೆ ಓಕೆ ಎಂದಿದೆ.
ಆರೋಗ್ಯ ಇಲಾಖೆಯ ತಾಂತ್ರಿಕ ವಿಭಾಗ ಆರೋಗ್ಯ ಸೇವಾ ಪ್ರಧಾನ ನಿರ್ದೇಶನಾಲಯದ ವತಿಯಿಂದ ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ ನೀಡಲಾಗಿದ್ದು, ಆಂಟಿವೈರಲ್ ಡ್ರಗ್ ರೆಮ್ ಡೆಸಿವಿರ್, ಹೆಚ್.ಆರ್.ಸಿ.ಟಿ. ಸ್ಕ್ಯಾನ್, ಸ್ಟಿರಾಯ್ಡ್ ಬಳಕೆಯ ಬಗ್ಗೆ ಸೂಚನೆ ನೀಡಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಡ ಎಂದು ಹೇಳಲಾಗಿದೆ.
ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಎದೆಯ ಹೆಚ್.ಆರ್.ಸಿ.ಟಿ. ಸ್ಕ್ಯಾನ್ ಮಾಡಬೇಕೆಂದು ಹೇಳಲಾಗಿದ್ದು, ರಕ್ತ ಹೆಪ್ಪುಗಟ್ಟಲು ತಡೆಯುವ ಔಷಧ ಮತ್ತು ಸ್ಟಿರಾಯ್ಡ್ ಗಳನ್ನು ವೈದ್ಯರ ಕಟ್ಟುನಿಟ್ಟಿನ ನಿಗಾದಲ್ಲಿ ಮಾತ್ರ ಬಳಸಬೇಕು ಎಂದು ತಿಳಿಸಲಾಗಿದೆ.
ರೆಮ್ ಡೆಸಿವಿರ್ ನಿಂದ ಇಂಜೆಕ್ಷನ್ ಅನ್ನು ಮಕ್ಕಳಿಗೆ ಕೊಡಬಾರದು. ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ದತ್ತಾಂಶವಿಲ್ಲ. ಲಕ್ಷಣ ರಹಿತ ಸೋಂಕಿತ ಮಕ್ಕಳಿದ್ದರೆ ಔಷಧ ಕೊಡಬೇಕು ಎಂದೇನಿಲ್ಲ. ಮಾಸ್ಕ್ ಧರಿಸಬೇಕು, ಸ್ವಚ್ಛತೆ, ಅಂತರ ಕಾಪಾಡಿಕೊಳ್ಳಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳ ಬೆರಳಿಗೆ ಪಲ್ಸ್ ಆಕ್ಸಿ ಮೀಟರ್ ಹಾಕಿ 6 ನಿಮಿಷ ವಾಕ್ ಮಾಡುವಂತೆ ಹೇಳಿ ಆರೋಗ್ಯ ಗಮನಿಸಬೇಕು. 6 ರಿಂದ 11 ವರ್ಷದ ಮಕ್ಕಳು ಪಾಲಕರ ನಿಗಾದಲ್ಲಿ ಮಾಸ್ಕ್ ಧರಿಸಬೇಕು. 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.