ನವದೆಹಲಿ: ಎಟಿಎಂ ಬಳಕೆ ಶುಲ್ಕ ಹೆಚ್ಚಳಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ. ಮಾಸಿಕ ಉಚಿತ ಮಿತಿ ನಂತರ ಎಟಿಎಂ ಬಳಕೆ ಶುಲ್ಕ ಹೆಚ್ಚಾಗಲಿದ್ದು, ಜನವರಿ 1, 2022 ರಿಂದ ಜಾರಿಗೆ ಬರಲಿದೆ.
ಒಂದು ತಿಂಗಳಲ್ಲಿ ಇಂತಿಷ್ಟು ಉಚಿತ ವಹಿವಾಟು ಮಿತಿ ಮೀರಿದ ನಂತರದ ಎಟಿಎಂನ ಪ್ರತಿ ವಹಿವಾಟಿಗೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಮುಂದಿನ ಜನವರಿ 1 ರಿಂದ 21 ರೂಪಾಯಿಗೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಬ್ಯಾಂಕುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಎಟಿಎಂ ವಹಿವಾಟಿಗೆ 21 ರೂಪಾಯಿ ಶುಲ್ಕ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ಗ್ರಾಹಕರು ತಮ್ಮ ಖಾತೆ ಹೊಂದಿದ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಸಲ ಬೇರೆ, ಬ್ಯಾಂಕ್ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ ಮೂರು ಸಲ ಮತ್ತು ಬೇರೆ ಕಡೆಗಳಲ್ಲಿ 5 ಸಲ ಉಚಿತವಾಗಿ ವಹಿವಾಟು ನಡೆಸಬಹುದಾಗಿದೆ ಎಂದು ಹೇಳಲಾಗಿದೆ.