ಉತ್ತರ ಪ್ರದೇಶದ 4 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ಫೋನ್ಗಳನ್ನ ನೀಡಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಸ್ಮಾರ್ಟ್ ಫೋನ್ಗಳನ್ನ ಬಳಕೆ ಮಾಡುವ ಬಗ್ಗೆಯೂ ಸರ್ಕಾರದ ವತಿಯಿಂದಲೇ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ತರಬೇತಿ ವಿಧಾನವನ್ನ ಪ್ಲಾನ್ ಮಾಡಲಾಗಿದೆ.
ತೆರಿಗೆದಾರರಿಗೆ ಬಿಗ್ ಶಾಕ್: ಐಟಿ ವಿವರ ಸಲ್ಲಿಸದಿದ್ರೆ ಎರಡುಪಟ್ಟು ಟಿಡಿಎಸ್ ಕಡಿತ
ಈ ವಿಚಾರವಾಗಿ ಮಾತನಾಡಿದ ರಾಜ್ಯ ಸರ್ಕಾರದ ವಕ್ತಾರ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣವನ್ನ ಅನುಷ್ಠಾನ ಮಾಡುವ ಸಲುವಾಗಿ ಯೋಗಿ ಆದಿತ್ಯನಾಥ್ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ಹಾಗೂ ಪೌಷ್ಠಿಕಾಂಶಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಹೀಗಾಗಿ ಅಂಗನವಾಡಿ ಕಾರ್ಯಕತೆರ್ಯರು ಸ್ಮಾರ್ಟ್ಫೋನ್ಗಳನ್ನ ಟೂಲ್ ರೀತಿಯಲ್ಲಿ ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.
ATM ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಪ್ರತಿ ವಹಿವಾಟಿಗೆ 21 ರೂ.ಗೆ ಶುಲ್ಕ ಹೆಚ್ಚಳ –ಉಚಿತ ಮಿತಿ ನಂತರದ ವಹಿವಾಟಿಗೆ ಅನ್ವಯ
ಈ ಸ್ಮಾರ್ಟ್ ಫೋನ್ಗಳು ಸಿಕ್ಕ ಬಳಿಕ ಗ್ರಾಮೀಣ ಭಾಗದ ಮಹಿಳಾ ಹಾಗೂ ಮಕ್ಕಳ ಸಂಪೂರ್ಣ ದಾಖಲೆಗಳು ಅಂಗನವಾಡಿ ಕಾರ್ಯಕರ್ತೆಯರ ಅಂಗೈಯಲ್ಲೇ ಇರಲಿದೆ. ಇದರಿಂದಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಲಿದೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.