ಅಲೋಪತಿ ವಿವಾದದಲ್ಲಿ ಸಿಲುಕಿದ್ದ ಯೋಗಗುರು ಬಾಬಾ ರಾಮ್ದೇವ್ ಕೊರೊನಾ ವೈರಸ್ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಕೊರೊನಾ ವೈರಸ್ ಹಾಕಿಸಿಕೊಳ್ಳಲಿರುವ ರಾಮ್ದೇವ್ ಜನರಿಗೂ ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಬಾಬಾ ರಾಮದೇವ್, ಯೋಗ ಮತ್ತು ಆಯುರ್ವೇದದ ಡಬಲ್ ಡೋಸ್ ತೆಗೆದುಕೊಳ್ಳುತ್ತಿದ್ದೇನೆ. ಕೊರೊನಾ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದರು.
ವೈರಸ್ ನ ಎಷ್ಟು ರೂಪಾಂತರ ಬಂದರೂ ಸೋಂಕಿನ ಅಪಾಯಕ್ಕೆ ಒಳಗಾಗುವುದಿಲ್ಲವೆಂದು ಬಾಬಾ ರಾಮ್‌ದೇವ್ ಹೇಳಿಕೊಂಡಿದ್ದರು. ಯೋಗ ಎಲ್ಲವನ್ನೂ ನಿಭಾಯಿಸಲಿದೆ ಎಂದು ಅವರು ಹೇಳಿದ್ದರು.
ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು. ಇದರಿಂದ ಸೋಂಕನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದರು. ಆದ್ರೆ ಈಗ ಲಸಿಕೆ ತೆಗೆದುಕೊಳ್ಳುವ ನಿರ್ಧಾರ ಏಕೆ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಬಾಬಾ ರಾಮದೇವ್, ಯೋಗ ಮತ್ತು ಆಯುರ್ವೇದವನ್ನು ಅಭ್ಯಾಸ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.