alex Certify ಕೊರೋನಾ: ಸರ್ಕಾರಿ ನೌಕರರಿಗೆ 15 ದಿನ ರಜೆ ಪಡೆಯಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ: ಸರ್ಕಾರಿ ನೌಕರರಿಗೆ 15 ದಿನ ರಜೆ ಪಡೆಯಲು ಅವಕಾಶ

ನವದೆಹಲಿ: ಸರ್ಕಾರಿ ನೌಕರರಿಗೆ, ಪೋಷಕರು ಅಥವಾ ಕುಟುಂಬದ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಲ್ಲಿ ಸರ್ಕಾರಿ ನೌಕರರು 15 ದಿನ ವಿಶೇಷ ಸಿಎಲ್ ಪಡೆಯಲು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ವಿಶೇಷ ಕ್ಯಾಶುಯಲ್ ಲೀವ್ 15 ದಿನಗಳಾದ ನಂತರ ಕುಟುಂಬ ಸದಸ್ಯರು, ಪೋಷಕರಲ್ಲಿ ಕೋವಿಡ್ ಸಕ್ರಿಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೆ ರಜೆ ಪಡೆಯಬಹುದಾಗಿದೆ. ಸರ್ಕಾರಿ ನೌಕರರು ಎದುರಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ಆದೇಶ ನೀಡಿದೆ.

ಸರ್ಕಾರಿ ನೌಕರ ಅಥವಾ ನೌಕರಳು ಕೊರೋನಾ ಪಾಸಿಟಿವ್ ಬಂದಾಗ ಹೋಮ್ ಕ್ವಾರಂಟೈನ್ ನಲ್ಲಿ ಇದ್ದರೆ 20 ದಿನಗಳವರೆಗೆ ರಜೆ ನೀಡಲಾಗುವುದು. ಅಂತಹ ನೌಕರರಿಗೆ ಕೋವಿಡ್ ಪಾಸಿಟಿವ್ ಬಂದು ನೌಕರರು ಮನೆಯ ಪ್ರತ್ಯೇಕತೆಯಲ್ಲಿದ್ದರೆ, ಆಸ್ಪತ್ರೆಗೆ ದಾಖಲಾಗಿದ್ದರೆ ವಿಶೇಷ ಸಾಂದರ್ಭಿಕ ರಜೆ ಪಡೆಯಬಹುದಾಗಿದೆ. 20 ದಿನ ಮೀರಿ ಆಸ್ಪತ್ರೆಗೆ ದಾಖಲಾದರೆ ಪ್ರಯಾಣ ರಜೆ ನೀಡಬಹುದು ಎಂದು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಆದೇಶ ಕಳುಹಿಸಲಾಗಿದೆ.

ಕುಟುಂಬದ ಅವಲಂಬಿತ ಸದಸ್ಯರು, ಪೋಷಕರಿಗೆ ಪಾಸಿಟಿವ್ ಬಂದರೆ ನೌಕರರು 15 ದಿನಗಳ ರಜೆ ಪಡೆಯಬಹುದು. ಸರ್ಕಾರಿ ನೌಕರ ಕೋವಿಡ್ ಪಾಸಿಟಿವ್ ವ್ಯಕ್ತಿ ನೇರ ಸಂಪರ್ಕಕ್ಕೆ ಬಂದಿದ್ದಲ್ಲಿ 7 ದಿನ ರಜೆ ಪಡೆದು ಮನೆಯಲ್ಲೇ ಇರಬೇಕಿದೆ. ಕಂಟೈನ್ಮೆಂಟ್ ವಲಯದಲ್ಲಿ ಸರ್ಕಾರಿ ನೌಕರ ಇದ್ದರೆ ಆತ ಮನೆಯಿಂದಲೇ ಕೆಲಸ ನಿರ್ವಹಿಸಬಹುದು. ಆ ದಿನಗಳನ್ನು ಕೆಲಸದ ದಿನವೆಂದು ಪರಿಗಣಿಸಲಾಗುತ್ತದೆ. ಈ ಆದೇಶಗಳು ಮಾರ್ಚ್ 25, 2020 ರಿಂದ ಮುಂದಿನ ಆದೇಶಗಳವರೆಗೆ ಅನ್ವಯವಾಗುತ್ತವೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...