ಮಂಗಳ ಗ್ರಹದಲ್ಲಿ ಕಲ್ಲಂಗಡಿ ಬೆಳೆದ ಜಮೀನು ಪತ್ತೆಯಾಗಿದೆ: ಪೊಲೀಸರ ಮಾಹಿತಿ ಎಂಬ ಶೀರ್ಷಿಕೆಯನ್ನ ಹೊಂದಿರುವ ಲೇಖನವೊಂದು ʼದಿ ನ್ಯೂಯಾರ್ಕ್ ಟೈಮ್ಸ್ʼನಲ್ಲಿ ವರದಿಯಾಗಿದೆ. ಜೋ ಷ್ಮೋ ಎಂಬವರು ಈ ಲೇಖವನ್ನ ಬರೆದಿದ್ದಾರೆ.
ಜೂನ್ 8ರಂದು ಮಂಗಳ ಗ್ರಹದಲ್ಲಿ ಕಲ್ಲಂಗಡಿ ಜಮೀನನ್ನು ಪತ್ತೆ ಮಾಡಲಾಗಿದೆ ಎಂಬ ಲೇಖನವನ್ನ ದಿ ನ್ಯೂಯಾರ್ಕ್ ಟೈಮ್ಸ್ ಆಕಸ್ಮಿಕವಾಗಿ ಪ್ರಕಟಿಸಿದೆ. ಅಲ್ಲದೇ ಕಲ್ಲಂಗಡಿ ಹಣ್ಣು ಬಹಳ ರುಚಿಕರವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ ಎಂದೂ ಸಹ ಬರೆಯಲಾಗಿತ್ತು. ಬಳಿಕ ಈ ಲೇಖನವನ್ನ ದಿ ನ್ಯೂಯಾರ್ಕ್ ಟೈಮ್ಸ್ ಡಿಲೀಟ್ ಮಾಡಿದೆ.
ಈ ಲೇಖನವನ್ನ ದಿ ನ್ಯೂಯಾರ್ಕ್ ಟೈಮ್ಸ್ ಡಿಲೀಟ್ ಮಾಡಿದ್ದರೂ ಸಹ ಇದರ ಸ್ಕ್ರೀನ್ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು ಪ್ರಸಿದ್ಧ ಸುದ್ದಿ ಮಾಧ್ಯಮ ನಗೆಪಾಟಲಿಗೀಡಾಗಿದೆ. ಈಗ ಈ ಲೇಖನವನ್ನ ತೆರೆಯಲು ಪ್ರಯತ್ನಿಸಿದರೆ ತಪ್ಪಾಗಿ ಪ್ರಕಟಿಸಲಾಗಿದೆ ಎಂಬ ವಾಕ್ಯ ಕಾಣಸಿಗುತ್ತದೆ.