alex Certify ಲಸಿಕೆ ಪಡೆದ ವಧು ಹುಡುಕಾಡಿದ್ಲಾ ಸೂಕ್ತ ವರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದ ವಧು ಹುಡುಕಾಡಿದ್ಲಾ ಸೂಕ್ತ ವರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಇಡೀ ವಿಶ್ವವೇ ಕೊರೊನಾದ ವಿರುದ್ಧ ಹೋರಾಡುತ್ತಿದ್ದು ಡೆಡ್ಲಿ ವೈರಸ್​ನ್ನು ನಾಶ ಮಾಡಲು ಇನ್ನಿಲ್ಲದ ದಾರಿಯನ್ನ ಹುಡುಕುತ್ತಿದೆ. ಈ ನಡುವೆ ಕೊರೊನಾ ಲಸಿಕೆ ಅಭಿಯಾನ ಕೂಡ ಸೋಂಕಿನ ವಿರುದ್ಧದ ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದೆ. ಈ ಎಲ್ಲದರ ನಡುವೆ ಯುವತಿಯೊಬ್ಬಳು ತನಗೆ ಕೊರೊನಾ ಲಸಿಕೆ ಪಡೆದ ವರನೇ ಬೇಕು ಎಂದು ಪತ್ರಿಕೆಯಲ್ಲಿ ಜಾಹೀರಾತನ್ನ ನೀಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವರ ಬೇಕಾಗಿದ್ದಾರೆ ಎಂಬ ಈ ಜಾಹೀರಾತಿನಲ್ಲಿ ಯುವತಿಯು ತಾನು ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್​ಗಳನ್ನ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದು ಲಸಿಕೆ ಪಡೆದ ವರನೇ ಬೇಕು ಎಂದು ಉಲ್ಲೇಖಿಸಿದ್ದಾಳೆ. ಈ ಜಾಹೀರಾತು ಜೂನ್​ 4ನೇ ತಾರೀಖಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.

ಈ ಜಾಹೀರಾತಿನ ಪ್ರಕಾರ ಯುವತಿಯು 24 ವರ್ಷದವಳಾಗಿದ್ದು ರೋಮನ್​ ಕ್ಯಾಥೋಲಿಕ್​ ಧರ್ಮಕ್ಕೆ ಸೇರಿದವಳಾಗಿದ್ದಾಳೆ. ಗಣಿತದಲ್ಲಿ ಎಂಎಸ್​ಸಿ ಪದವಿ ಪಡೆದಿರುವ ಈಕೆ ಸ್ವಯಂ ಉದ್ಯೋಗಿ ಕೂಡ ಹೌದು. ಈಕೆ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್​ಗಳನ್ನ ಪಡೆದಿದ್ದಾಳೆ. ಈಕೆ ರೋಮನ್​ ಕ್ಯಾಥೋಲಿಕ್​ ಪಂಗಡಕ್ಕೆಸೇರಿದ ಹಾಗೂ ಎರಡೂ ಡೋಸ್​ ಲಸಿಕೆಗಳನ್ನ ಪಡೆದ ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದಾಳೆ.

ಈ ಜಾಹಿರಾತು ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಎಂದರೆ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್​ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಲಸಿಕೆ ಪಡೆದ ವಧು ಲಸಿಕೆ ಪಡೆದ ವರನ ಹುಡುಕಾಟದಲ್ಲಿದ್ದಾಳೆ. ಈ ಮದುವೆಯಲ್ಲಿ ಬೂಸ್ಟರ್​ ಶಾಟ್​​ ಆದ್ಯತೆಯ ಉಡುಗೊರೆಯಾಗಲಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ..!? ಇದು ನಮ್ಮ ಹೊಸ ಸಹಜ ಜೀವನವೇ..? ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ.

ಫ್ಯಾಕ್ಟ್​ ಚೆಕ್​ನಲ್ಲಿ ಇದೊಂದು ನಕಲಿ ಜಾಹೀರಾತು ಎಂಬ ವಿಚಾರ ಬೆಳಕಿಗೆ ಬಂದಿದೆ. ಗೋವಾದ ನಿವಾಸಿಯೊಬ್ಬರು ಕೋವಿಡ್ 19 ಲಸಿಕೆ ಪಡೆಯಲು ಜನರನ್ನ ಉತ್ತೇಜಿಸುವ ಸಲುವಾಗಿ ಈ ರೀತಿಯ ಅಭಿಯಾನ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ವರಾನ್ವೇಷಣೆಯ ಜಾಹೀರಾತುಗಳು ಈ ರೀತಿ ಇರಬಹುದೆಂದು ಹೇಳುವ ಸಲುವಾಗಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 58 ವರ್ಷದ ಸವಿಯೊ ಫಿಗುರೆಡೊ ಈ ಪೋಸ್ಟ್​ ಶೇರ್​ ಮಾಡಿದ್ದರು ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...