alex Certify ಸೋನಂ ಜನ್ಮದಿನದಂದು ಬಾಲ್ಯದ ಫೋಟೋ ಶೇರ್​ ಮಾಡಿದ ತಂದೆ ಅನಿಲ್​ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನಂ ಜನ್ಮದಿನದಂದು ಬಾಲ್ಯದ ಫೋಟೋ ಶೇರ್​ ಮಾಡಿದ ತಂದೆ ಅನಿಲ್​ ಕಪೂರ್​

ಬಾಲಿವುಡ್​ ನಟಿ ಸೋನಮ್​ ಕಪೂರ್​ರ 36ನೇ ಜನ್ಮದಿನದ ವಿಶೇಷವಾಗಿ ಸೋನಂ ತಂದೆ ಅನಿಲ್​ ಕಪೂರ್​​ ಅತ್ಯಂತ ಸುಂದರ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಸೋನಮ್​ ಕಪೂರ್​ರ ಬಾಲ್ಯದ ಫೋಟೋಗಳನ್ನ ಶೇರ್​ ಮಾಡಿರುವ ಅನಿಲ್​ ಕಪೂರ್​ ಕನಸುಗಳನ್ನ ಬೆನ್ನಟ್ಟುತ್ತಾ ಹೃದಯದ ಮಾತುಗಳನ್ನ ಕೇಳುವ ಮಗಳಿಗೆ, ಸೋನಮ್​ ನೀನು ದಿನದಿಂದ ದಿನಕ್ಕೆ ಬೆಳೆಯೋದನ್ನ ನೋಡೋದೇ ಪೋಷಕರಾದ ನಮಗೆ ಕನಸು ನನಸಾದ ಕ್ಷಣವಾಗಿದೆ. ನೀನು ಶಕ್ತಿಶಾಲಿ, ದಯಾಳು ಆಗಿದ್ದೀಯಾ. ಅಲ್ಲದೇ ನೀನು ನಿನ್ನ ಪ್ರಭಾವವನ್ನ ಮೂಡಿಸುವಲ್ಲಿ ಯಶಸ್ವಿಯಾಗುತ್ತೀಯಾ. ಇದು ನಿನ್ನಲ್ಲಿ ನನಗೆ ಇಷ್ಟವಾಗುವ ಗುಣವಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಕಪೂರ್ ಕುಟುಂಬ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವಗಳನ್ನ ಎಂದಿಗೂ ಮುಂಬೈನಲ್ಲಿ ಅದ್ಧೂರಿಯಾಗಿ ಆಚರಿಸುತ್ತೆ. ಆದರೆ ಸೋನಂ ತನ್ನ ಪತಿ ಆನಂದ್​ ಜೊತೆ ಲಂಡನ್​ನಲ್ಲಿ ನೆಲೆಸಿದ್ದಾಳೆ. ಕೊರೊನಾ ಕಾರಣದಿಂದಾಗಿ ತಾಯ್ನಾಡಿಗೆ ಮರಳಲೂ ಆಗುತ್ತಿಲ್ಲ. ಹೀಗಾಗಿ ಈ ವಿಚಾರವಾಗಿಯೂ ಇನ್​ಸ್ಟಾಗ್ರಾಂನಲ್ಲಿ ಬರೆದಿರುವ ಅನಿಲ್​ ಕಪೂರ್​, ನೀನು ಹಾಗೂ ಆನಂದ್​​ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದೀರಾ ಅನ್ನೋದೇ ನಮಗೆ ಸಂತಸದ ವಿಚಾರವಾಗಿದೆ. ನಿಮ್ಮನ್ನ ಭೇಟಿಯಾಗಲು ನಾನು ಕಾಯುತ್ತಿದ್ದೇನೆ. ಜನುಮ ದಿನದ ಶುಭಾಶಯಗಳು ಸೋನಂ ಮಗಳೇ..! ಎಂದಿದ್ದಾರೆ.

ಈ ಪೋಸ್ಟ್​ಗಳಿಗೆ ಕಮೆಂಟ್​ ವಿಭಾಗದಲ್ಲಿ ಪ್ರತಿಕ್ರಿಯೆ ನೀಡಿರುವ ಸೋನಂ ಕಪೂರ್​, ಲವ್​ ಯೂ ಸೋ ಮಚ್​ ಡ್ಯಾಡಿ, ಎಲ್ಲಾದಕ್ಕಿಂತ ಹೆಚ್ಚಾಗಿ ನಿಮ್ಮನ್ನ ಮಿಸ್​ ಮಾಡಿಕೊಳ್ತಿದ್ದೇನೆ ಎಂದು ಬರೆದಿದ್ದಾರೆ.

https://www.instagram.com/p/CP313OppPU_/?utm_source=ig_web_copy_link

https://www.instagram.com/p/CP4RZIThCUk/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...