ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿರುವ ಭಾರತ ತಂಡದೊಂದಿಗೆ ಇಂಗ್ಲೆಂಡ್‌ಗೆ ಬಂದಿಳಿದಿರುವ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಸಹ ಇದ್ದಾರೆ.
ಇತ್ತೀಚೆಗೆ ಎಬಿ ಡಿ ವಿಲಿಯರ್ಸ್ ಮಡದಿ ಡ್ಯಾನಿಯೆಲ್ಲೆ ಡಿ ವಿಲಿಯರ್ಸ್ ಅವರು ಅನುಷ್ಕಾ ಹಾಗೂ ವಮಿಕಾ ಜೊತೆಗೆ ತೆಗೆದುಕೊಂಡ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.
‘ಟ್ಯಾನಿಂಗ್’ ಕಡಿಮೆ ಮಾಡಲು ಮುಖಕ್ಕೆ ಹಚ್ಚಿ ಪೇರಲೆ ಎಲೆ ಫೇಸ್ ಪ್ಯಾಕ್
ಇದೀಗ ವಿರಾಟ್ ಕೊಹ್ಲಿ ಹಸುಗೂಸಾಗಿದ್ದಾಗ ಸೆರೆ ಹಿಡಿದ ಚಿತ್ರವೊಂದು ವೈರಲ್ ಆಗಿದೆ. ನೀಲಿ ಹಾಗೂ ಬಿಳಿ ಬಣ್ಣದ ಬಟ್ಟೆಯಲ್ಲಿ, ಕೆದರಿಕೊಂಡ ಕೂದಲಿನಲ್ಲಿ ಬಲು ಬಬ್ಲಿಯಾಗಿ ಕಾಣುವ ವಿರಾಟ್‌ರ ಚಿತ್ರವನ್ನು ಕಂಡು ನೆಟ್ಟಿಗರು ಖುಷಿ ಪಟ್ಟಿದ್ದಾರೆ.
ಕಠಿಣ ಲಾಕ್ಡೌನ್ ಸೇರಿ ಎಲ್ಲಾ ನಿರ್ಬಂಧ ಇದ್ರೂ ಸಿಎಂ ತವರಲ್ಲೇ ಕಡಿಮೆಯಾಗದ ‘ಕೊರೊನಾ’
ಇದೇ ವೇಳೆ, ಫೈನಲ್ ಪಂದ್ಯ ನಡೆಯಲಿರುವ ಸೌಥಾಂಪ್ಟನ್‌ನ ಸ್ಟೇಡಿಯಂಗೆ ಅಂಟಿಕೊಂಡೇ ಇರುವ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಆಗಿರುವ ಅನುಷ್ಕಾ, ಕ್ರೀಡಾಂಗಣದಲ್ಲಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು ಸೆರೆ ಹಿಡಿದು ಶೇರ್ ಮಾಡಿಕೊಂಡಿದ್ದಾರೆ.