alex Certify ʼಸುಪ್ರೀಂʼ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ 5ನೇ ಕ್ಲಾಸ್ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸುಪ್ರೀಂʼ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ 5ನೇ ಕ್ಲಾಸ್ ಬಾಲಕಿ

Thank you, your honour': Class 5 girl writes to CJI Ramana over Covid, gets a reply | Latest News India - Hindustan Times

ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗುತ್ತಿರುವ ಸಂಬಂಧ ಇರುವ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಲು ಆದೇಶ ಕೊಟ್ಟ ಕಾರಣ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಕೇರಳದ 5ನೇ ತರಗತಿಯ ಬಾಲಕಿಯೊಬ್ಬಳು ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾಳೆ.

ತ್ರಿಶ್ಶೂರಿನ ಕೇಂದ್ರೀಯ ವಿದ್ಯಾಲಯದ ಲಿಡ್ವಿನಾ ಜೋಸೆಫ್‌ ರಮಣರಿಗೆ ತನ್ನದೇ ಕೈಬರಹದಲ್ಲಿ ಪತ್ರ ಬರೆದು ದೇಶದಲ್ಲಿ ಆಮ್ಲಜನಕ ಪೂರೈಕೆಗೆ ಸುಪ್ರೀಂ ಕೋರ್ಟ್ ಕೊಟ್ಟ ಆದೇಶಗಳ ಕುರಿತಾಗಿ ’ಹೆಮ್ಮೆ ಮತ್ತು ಸಂತೋಷವಿದೆ’ ಎಂದು ಬರೆದಿದ್ದಾಳೆ.

ಬಾಳೆದಿಂಡಿನ ಸೇವನೆಯಿಂದ ಹೊಟ್ಟೆಯ ಕಲ್ಮಶ ದೂರ

“ನಿಮ್ಮ ನ್ಯಾಯಾಲಯವು ಆಮ್ಲಜನಕದ ಪೂರೈಕೆಯನ್ನು ಎಲ್ಲೆಡೆ ವಿತರಿಸಲು ಕೊಟ್ಟ ಆದೇಶಗಳಿಂದಾಗಿ ಅನೇಕ ಜೀವಗಳು ಉಳಿದಿವೆ. ಕೋವಿಡ್-19ನ ಪಿಡುಗು ಹಾಗೂ ಸಾವುಗಳ ಸಂಖ್ಯೆಯನ್ನು ತಗ್ಗಿಸಲು, ಅದರಲ್ಲೂ ದೆಹಲಿಯಲ್ಲಿ, ಘನ ನ್ಯಾಯಾಲಯ ಪರಿಣಾಮಕಾರಿ ನಡೆಗಳನ್ನು ಇಟ್ಟಿದೆ. ಮಾನ್ಯರೇ ನಿಮಗೆ ಇದಕ್ಕಾಗಿ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ನನಗೆ ಈ ಬಹಳ ಹೆಮ್ಮೆ ಹಾಗೂ ಸಂತಸವಾಗುತ್ತಿದೆ” ಎಂದು ಈ ಬಾಲಕಿ ಬರೆದಿದ್ದಾಳೆ.

ಅಬ್ಬಬ್ಬಾ..! ಒಂದೇ ಕ್ಷಣಕ್ಕೆ ತಲೆಯನ್ನ 180 ಡಿಗ್ರಿ ತಿರುಗಿಸಿದ ಭೂಪ

ಬಾಲಕಿಯ ಪತ್ರಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರು, “ನ್ಯಾಯಾಧೀಶರ ಕರ್ತವ್ಯವನ್ನು ಮೆಚ್ಚಿ ಬರೆದಿರುವ ಈ ಸುಂದರ ಪತ್ರವು ಹೃದಯಸ್ಪರ್ಶಿಯಾಗಿದೆ” ಎಂದಿದ್ದು, ಕೊರೋನಾ ವೈರಸ್‌ ಅನ್ನು ನ್ಯಾಯಾಧೀಶರು ಚಚ್ಚಿಹಾಕುತ್ತಿರುವ ಕಾರ್ಟೂನ್‌ ಚಿತ್ರ ಬರೆದಿರುವ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...