alex Certify ಬಾಲ್ಯದ ಕನಸನ್ನು ಸಹೋದರನೊಂದಿಗೆ ಸಾಕಾರಗೊಳಿಸಿಕೊಳ್ಳಲು ಮುಂದಾದ ವಿಶ್ವದ ಸಿರಿವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದ ಕನಸನ್ನು ಸಹೋದರನೊಂದಿಗೆ ಸಾಕಾರಗೊಳಿಸಿಕೊಳ್ಳಲು ಮುಂದಾದ ವಿಶ್ವದ ಸಿರಿವಂತ

ಮುಂದಿನ ತಿಂಗಳು ತಾವು ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡಲಿದ್ದೇವೆ ಎಂದು ಜೆಫ್​ ಬೆಜೋಸ್​ ಘೋಷಣೆ ಮಾಡಿದ್ದಾರೆ. ಬ್ಲೂ ಓರಿಜಿನ್​​ನ ಸಂಸ್ಥಾಪಕರಾಗಿರುವ ಜೆಫ್​ ಬೆಜೋಸ್​ ತನ್ನ ಸಹೋದರನ ಜೊತೆ ಸೇರಿ ತಮ್ಮ ಕಂಪನಿಯ ಮೊದಲ ಸಬ್​ ಆರ್ಬಿಟಲ್​ ಸೈಟ್​ ಸೀಯಿಂದದ ಪ್ರವಾಸವನ್ನ ಎಂಜಾಯ್​ ಮಾಡಲಿದ್ದಾರೆ.

ಮೊದಲ ಬಾಹ್ಯಾಕಾಶ ಪ್ರಯಾಣಕ್ಕಾಗಿ ರಾಕೆಟ್​ ಕಂಪನಿಯು ಜುಲೈ 20ನೇ ತಾರೀಖನ್ನ ಗುರಿಯಾಗಿಸಿಕೊಂಡಿದೆ. 10 ನಿಮಿಷಗಳ ಅವಧಿಯ ಬಾಹ್ಯಾಕಾಶ ಪ್ರವಾಸ ಇದಾಗಿದೆ. ಇದರಲ್ಲಿ ನಾಲ್ಕು ನಿಮಿಷಗಳ ಕಾಲ ಪ್ರಯಾಣಿಕರು ಕಾರ್ಮನ್​ ಲೈನ್​ನ ಮೇಲೆ ಇರಲಿದ್ದಾರೆ. ಭೂಮಿಯ ವಾತಾವರಣ ಹಾಗೂ ಬಾಹ್ಯಾಕಾಶದ ನಡುವಿನ ಬೌಂಡರಿಯನ್ನ ಕಾರ್ಮನ್​ ಲೈನ್​ ಎಂದು ಕರೆಯಲಾಗುತ್ತದೆ.

ದಿ ನ್ಯೂ ಶೆಪರ್ಡ್ ರಾಕೆಟ್​ ಹಾಗೂ ಕ್ಯಾಪ್ಸೂಲ್​ ಕಾಂಬೋದಲ್ಲಿ 6 ಪ್ರಯಾಣಿಕರು ಭೂಮಿಯಿಂದ 100 ಕಿಲೋಮೀಟರ್​ಗೂ ಅಧಿಕ ಎತ್ತರದಲ್ಲಿ ಪ್ರಯಾಣ ಮಾಡಲಿದ್ದಾರೆ.

ನಾವು ಐದು ವರ್ಷ ವಯಸ್ಸಿನವನಾದಾಗಿನಿಂದ ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸನ್ನ ಹೊಂದಿದ್ದೆ. ಜುಲೈ 20ರಂದು ನಾನು ನನ್ನ ಸಹೋದರ ಜೊತೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದೇನೆ ಎಂದು ಬೆಜೋಸ್​ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ನ್ಯೂ ಶೆಪರ್ಡ್​ ಪ್ರಯಾಣ ಬೆಳೆಸಲು ನಡೆಯುತ್ತಿರುವ ಹರಾಜು ಪ್ರಕ್ರಿಯೆ ಶನಿವಾರ ಕೊನೆಯಾಗಲಿದೆ. 2.8 ಮಿಲಿಯನ್​ ಡಾಲರ್​ ಮೊತ್ತದ ಹರಾಜು ಪ್ರಕ್ರಿಯೆಯಲ್ಲಿ 143 ದೇಶದ ಪ್ರಜೆಗಳು ಭಾಗವಹಿಸಿದ್ದಾರೆ.

https://www.instagram.com/p/CP0MSOqnYEo/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...