ಚಳಿಗಾಲದಲ್ಲಿ ಕೆಲವರ ಕೈ-ಕಾಲುಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೆಲಸ ಮಾಡೋದು ಕಷ್ಟವಾಗುತ್ತದೆ. ಅದರ ಉರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಚಳಿಗಾಲದಲ್ಲಿ ನಿಮ್ಮ ಕೈ-ಕಾಲುಗಳು ಕೂಡ ಹೀಗೆ ಆದಲ್ಲಿ ಮನೆ ಮದ್ದು ಬಳಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಊದಿಕೊಂಡಿರುವ ಕೈ-ಕಾಲಿನ ಜಾಗಕ್ಕೆ ನಿಂಬೆ ರಸವನ್ನು ಹಚ್ಚಿ. ನಿಂಬೆ ರಸ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಧಾನವಾಗಿ ಊದಿಕೊಂಡಿರುವ ಕೈ-ಕಾಲುಗಳು ಸಹಜ ಸ್ಥಿತಿಗೆ ಬರಲು ನೆರವಾಗುತ್ತದೆ.
ರಕ್ತ ಸಂಚಾರವನ್ನು ಈರುಳ್ಳಿ ಸುಲಭಗೊಳಿಸುತ್ತದೆ. ಹಾಗಾಗಿ ಊದಿದ ಜಾಗಕ್ಕೆ ಈರುಳ್ಳಿ ರಸವನ್ನು ಹಚ್ಚಿ.
ಆಲೂಗಡ್ಡೆಯ ಒಂದು ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪನ್ನು ಹಾಕಿ. ನಂತ್ರ ಅದನ್ನು ಊತವಿರುವ ಜಾಗದ ಮೇಲಿಡಿ.
ಕಾಳುಮೆಣಸಿನ ಕಾಳನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ. ಈ ಮಿಶ್ರಣವನ್ನು ಊತವಿರುವ ಜಾಗಕ್ಕೆ ಹಚ್ಚುವುದರಿಂದ ಹಿತವೆನಿಸುತ್ತದೆ.