ವೃದ್ಧರಿಗೆ ಸ್ಟಾರ್ಟ್ ಅಪ್ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ವೃದ್ಧರಿಗಾಗಿ ಸರ್ಕಾರ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ಶುರು ಮಾಡಿದೆ. ವೃದ್ಧರ ಸಂತೋಷ, ಆರೋಗ್ಯಕರ ಮತ್ತು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯರಾಗಿರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ಪ್ರಾರಂಭಿಸಿದೆ.
ವೃದ್ಧರಿಗೆ ಕೆಲಸ ನೀಡುವ ಕಂಪನಿಗಳಿಗೆ ಸಚಿವಾಲಯವು ಶೇಕಡಾ 50 ರವರೆಗೆ ಆರ್ಥಿಕ ನೆರವು ನೀಡುತ್ತದೆ. ಈ ಸಹಾಯವನ್ನು ಸಾಲವಾಗಿ ನೀಡಲಾಗುವುದಿಲ್ಲ. ಇಕ್ವಿಟಿಯಾಗಿ ನೀಡಲಾಗುವುದು. ಇದಕ್ಕಾಗಿ ಸಚಿವಾಲಯವು ಪೋರ್ಟಲ್ ಪ್ರಾರಂಭಿಸಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಯೋಜನೆಯಡಿ ವೃದ್ಧರಿಗೆ ಆರೋಗ್ಯ, ವೈದ್ಯಕೀಯ, ಫಿಟ್‌ನೆಸ್, ಪ್ರಯಾಣ, ಹಣಕಾಸು, ಕಾನೂನು, ವಿಮೆ, ವಸತಿ, ಆಹಾರ, ಆರೈಕೆ ಕೇಂದ್ರಕ್ಕೆ ಸಂಬಂಧಿಸಿದ ಸ್ಟಾರ್ಟ್ಅಪ್‌ಗಳನ್ನು ಪ್ರಾರಂಭಿಸಬಹುದು. ವೃದ್ಧರ ಆರೈಕೆಗಾಗಿ ಸ್ಟಾರ್ಟ್ ಅಪ್ ಶುರು ಮಾಡಿದ್ರೆ 1 ಕೋಟಿಯವರೆಗೆ ಸಹಾಯ ಸಿಗಲಿದೆ. ದೇಶದಲ್ಲಿ ವೃದ್ಧರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ವೃದ್ಧರ ಪಾಲು 2001 ರಲ್ಲಿ ಶೇಕಡಾ 7.5ರಷ್ಟಿತ್ತು. 2026 ರ ವೇಳೆಗೆ ಇದು ಶೇಕಡಾ 12.5 ಕ್ಕೆ ಏರುವ ಸಾಧ್ಯತೆಯಿದೆ. 2050 ರ ವೇಳೆಗೆ ಇದು ಶೇಕಡಾ 19.9 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.