ಉದ್ಯೋಗಿಗಳಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಶೀಘ್ರದಲ್ಲೇ ನಿಮ್ಮ ಪಿಎಫ್ ಹಣ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲಿದೆ. ಹೊಸ ಕಾರ್ಮಿಕ ಸಂಹಿತೆಯ ಅನುಷ್ಠಾನದ ನಂತರ ನೌಕರರಿಗೆ ಸಿಗುವ ಸಂಬಳ ಕಡಿಮೆಯಾಗಲಿದೆ. ಪಿಎಫ್ ಹೆಚ್ಚಾಗಲಿದೆ.
ಹೊಸ ನೀತಿ ಸಂಹಿತೆ ಏಪ್ರಿಲ್ 1, 2021 ರಿಂದ ಜಾರಿಗೆ ತರಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಅದನ್ನು ಮುಂದೂಡಲಾಯಿತು. ಸರ್ಕಾರ ಇದನ್ನು ಮುಂಬರುವ 2 ಅಥವಾ 3 ತಿಂಗಳಲ್ಲಿ ಕಾರ್ಯಗತಗೊಳಿಸುವ ಸಾಧ್ಯತೆಯಿದೆ. ಹೊಸ ಕಾರ್ಮಿಕ ಸಂಹಿತೆ ಪ್ರಕಾರ, ನೌಕರರ ಟೇಕ್ ಹೋಮ್ ವೇತನ ಕಡಿಮೆಯಾಗಲಿದೆ. ಪಿಎಫ್ ಕೊಡುಗೆ ಹೆಚ್ಚಾಗಲಿದೆ. ವೇತನ ಸಂಹಿತೆ ಜಾರಿಗೆ ಬಂದ ನಂತ್ರ ನೌಕರರ ಮೂಲ ವೇತನ ಮತ್ತು ಭವಿಷ್ಯ ನಿಧಿಯ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಪ್ರಮುಖ ಬದಲಾವಣೆಯಾಗಲಿದೆ.
ವೇತನ ಸಂಹಿತೆ ಕಾಯ್ದೆ 2019 ರ ಪ್ರಕಾರ, ಯಾವುದೇ ಕಂಪನಿಯಲ್ಲಿ ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ ಶೇಕಡಾ 50 ಕ್ಕಿಂತ ಕಡಿಮೆಯಿರಬಾರದು. ಹೊಸ ನೀತಿ ಜಾರಿಗೆ ಬಂದಲ್ಲಿ ಸಿಟಿಸಿಯ ಶೇಕಡಾ 50ರಷ್ಟು ಮೂಲ ವೇತನವಾಗಿ ಸಿಗಲಿದೆ. ಇದ್ರಿಂದ ಭವಿಷ್ಯನಿಧಿ ಮತ್ತು ಗ್ರಾಚ್ಯುಟಿ ಕೊಡುಗೆ ಹೆಚ್ಚಾಗಲಿದೆ.