ಬೀಜಿಂಗ್: ಕೊರೊನಾ ಸೋಂಕಿಗೆ ಚೀನಾ ಉತ್ಪಾದಿಸಿರುವ ಸಿನೋಫಾರ್ಮ್ ಹಾಗೂ ಸಿನೋವಾಕ್ ಲಸಿಕೆಗಳನ್ನು ಪಡೆದವರು ತನ್ನ ದೇಶದಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಸೌದಿ ಅರೇಬಿಯಾ ಆದೇಶ ಹೊರಡಿಸಿದೆ.
ಕೋವಿಡ್ ನಿಂದ ಗುಣಮುಖರಾದ ಮಕ್ಕಳಲ್ಲಿ ಆರಂಭವಾಗಿದೆ ಹೊಸ ಸಮಸ್ಯೆ
ಚೀನಾದ ಈ ಎರಡೂ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಆದಾಗ್ಯೂ ಕೂಡ ಚೀನಾ ವ್ಯಾಕ್ಸಿನ್ ಪಡೆದವರಿಗೆ ಸೌದಿ ಅರೇಬಿಯಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ತಮ್ಮ ದೇಶಕ್ಕೆ ಪ್ರವೇಶ ನಿರಾಕರಿಸಿದೆ. ಇದು ಪಾಕಿಸ್ತಾನ ಆತಂಕಕ್ಕೆ ಕಾರಣವಾಗಿದೆ. ಇದು ಚೀನಾದ ಸಿನೋಫಾರ್ಮ್ ಹಾಗೂ ಸಿನೋವಾಕ್ ಲಸಿಕೆಗಳನ್ನು ಪಡೆದು ವಿತರಿಸಿರುವ ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಎಚ್ಚರ….! ಕೆನಡಾದಲ್ಲಿ ಹರಡ್ತಿದೆ ನಿಗೂಢ ಕಾಯಿಲೆ
ಈ ನಿಟ್ಟಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ವಿದೇಶಗಳಲ್ಲಿ ಕೆಲಸ ಮಾಡುವವರಿಗೆ, ವಿದ್ಯಾರ್ಥಿಗಳಿಗೆ, ಹಜ್ ಗೆ ಭೇಟಿ ನೀಡುವರಿಗೆ ವಿದೇಶಿ ಪ್ರವಾಸಿಗರಿಗೆ ಪಾಕಿಸ್ತಾನ, ಫೈಜರ್ ಲಸಿಕೆ ನೀಡಲು ಚಿಂತನೆ ನಡೆಸಿದೆ.