ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಅಂತಿದ್ರೆ ಅದು 100 ವರ್ಷದ ಇಳಿವಯಸಿನಲ್ಲೂ ವಕೀಲ ವೃತ್ತಿ ಮಾಡುತ್ತಿರುವ ರಾಜಸ್ಥಾನದ ಜೈಪುರದ ಈ ವ್ಯಕ್ತಿಯೇ ಪ್ರತ್ಯಕ್ಷ ಸಾಕ್ಷಿ.
ಶುಕ್ರವಾರದಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಲೇಖರಾಜ್ ಮೆಹ್ತಾ ಎಂಬವರು ಇನ್ನೂ ವಕೀಲ ವೃತ್ತಿಯನ್ನ ಮುಂದುವರಿಸಿದ್ದಾರೆ..! ಕಾನೂನು ಕ್ಷೇತ್ರದಲ್ಲಿ ಮೆಹ್ತಾ ಹೆಸರು ದಂತಕತೆಗಳ ಸಾಲಿನಲ್ಲಿ ಸೇರಿದ್ದು ಇವರು ಸಾಕಷ್ಟು ನ್ಯಾಯಮೂರ್ತಿಗಳಿಗೂ ವಕೀಲಿ ವೃತ್ತಿಯನ್ನ ಕಲಿಸಿದ್ದಾರಂತೆ..!
1947ರಿಂದ ಮೆಹ್ತಾ ವಕೀಲ ವೃತ್ತಿಯನ್ನ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕೊರೊನಾ ಸಂಕಷ್ಟವಿರೋ ಈ ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಕೋರ್ಟ್ಗೆ ಹಾಜರಾಗಿದ್ದಾರೆ. ಸದಾ ಹೊಸ ಹೊಸ ವಿಷಯಗಳನ್ನ ಕಲಿಯಲು ಇಚ್ಚಿಸುವ ಮೆಹ್ತಾರ ಆಸಕ್ತಿಗೆ ವಯಸ್ಸು ಎಂದಿಗೂ ಅಡ್ಡಿ ಎನಿಸಲೇ ಇಲ್ಲ..!
ವಿಡಿಯೋ ಕಾಲಿಂಗ್ ಮೂಲಕ ಕಕ್ಷಿದಾರರ ಜೊತೆ ಸಂಪರ್ಕದಲ್ಲಿರುವ ಮೆಹ್ತಾ, ಕೊರೊನಾ ಲಾಕ್ಡೌನ್ಗಳಂತಹ ಸಂದರ್ಭದಲ್ಲೂ ಪ್ರ್ಯಾಕ್ಟಿಸ್ ಮುಂದುವರಿಸಿದ್ದಾರೆ. ಸಿಜೆಐ ಆರ್ಎಂ ಲೋಧಾ, ನ್ಯಾಯಮೂರ್ತಿ ದಲ್ಬೀರ್ ಭಂಡಾರಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಎಂಎಲ್ ಸಿಂಘ್ವಿರಂತಹ ಅನೇಕರಿಗೆ ಇವರು ತರಬೇತಿ ನೀಡಿದ್ದಾರೆ.