ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಷ್ಯಾದ 18 ವರ್ಷದ ಬ್ಲಾಗರ್ ಒಬ್ಬ ಪೋಸ್ಟ್ ಮಾಡಿರುವ ವಿಡಿಯೋ ಗಲ್ಲಾ ಪೆಟ್ಟಿಗೆ ಸೌಂಡ್ ಮಾಡ್ತಾ ಇದೆ. ಅಂದ ಹಾಗೆ ಈ ವಿಡಿಯೋ ಇಷ್ಟೊಂದು ಫೇಮಸ್ ಆಗೋಕೆ ಕಾರಣನಾದ ಈ ವ್ಯಕ್ತಿಯ ಹೆಸರು ಮ್ಯಾಗೊಮೆಡೋವ್.
ಮ್ಯಾಗೊಮೆಡೋವ್ನ್ನು ನೋಡಿದ್ರೆ ನಿಮಗೆ ಆತ ಪುಟ್ಟ ಹುಡುಗ ಎನಿಸಬಹುದು. ಆದರೆ ವಿಷಯ ಇದಲ್ಲ. ಈತ ಹುಟ್ಟಿನಿಂದಲೇ ಕುಬ್ಜತೆಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ತನ್ನ ದೇಹದ ನ್ಯೂನತೆಯ ನಡುವೆಯೂ ಈತ ಸೋಶಿಯಲ್ ಮೀಡಿಯಾದ ಮೂಲಕ ಬಹುತೇಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.
ಟಿಕ್ಟಾಕ್ ಹಾಗೂ ಇನ್ಸ್ಟಾಗ್ರಾಂಗಳೆರಡರಲ್ಲಿಯೂ ವಿಡಿಯೋವನ್ನ ಶೇರ್ ಮಾಡಲಾಗಿದೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದರೆ ಮ್ಯಾಗೊಮೆಡೋವ್ ಯುಎಫ್ಸಿ ಲೈಟ್ವೇಟ್ ಚಾಂಪಿಯನ್ ಖಬೀಬ್ ನರ್ಮಾಗೊಮೆಡೋವ್ರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಿತ್ರ ಅಂದ್ರೆ ಅನೇಕರು ಇವರಿಬ್ಬರು ತಂದೆ – ಮಗ ಇರಬಹುದೇ ಎಂದು ಅಂದಾಜಿಸಿದ್ದರಂತೆ..!
https://www.instagram.com/p/CPyazBajtjn/?utm_source=ig_web_copy_link