ಸಮಯಪ್ರಜ್ಞೆ ಅನ್ನೋದು ಎಷ್ಟೋ ಬಾರಿ ಅಪಾಯದಂಚಿನಲ್ಲಿರುವವರ ಜೀವ ಕಾಪಾಡಲೂ ಸಹ ಸಹಕಾರಿಯಾಗಿದೆ. ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಪೊಲೀಸ್ ಅಧಿಕಾರಿಯೊಬ್ಬರು ಉಸಿರುಗಟ್ಟಿ ಬಳಲುತ್ತಿದ್ದ ಮೂರು ವಾರದ ಮಗುವನ್ನ ಪ್ರಾಣಾಪಾಯದಿಂದ ಬಚಾವ್ ಮಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನ ಗಳಿಸಿದೆ.
ಅಮೆರಿಕದ ಅರ್ಕಾನ್ಸಾಸ್ ಮೂರು ವಾರದ ಮಗು ಮಾತ್ರೆಯನ್ನ ನುಂಗಿದ ಪರಿಣಾಮ ಉಸಿರಾಟದ ಸಮಸ್ಯೆ ಎದುರಿಸೋದು ಮಾತ್ರವಲ್ಲದೇ ಮಗುವಿನ ದೇಹ ಸಂಪೂರ್ಣ ನೇರಳೆ ಬಣ್ಣಕ್ಕೆ ತಿರುಗಲು ಆರಂಭಿಸಿತ್ತು. ಇದರಿಂದ ಆತಂಕಗೊಂಡ ಪೋಷಕರು ಸಹಾಯವಾಣಿಗೆ ಕರೆ ಮಾಡಿದ್ದಾರೆ, ಕೂಡಲೇ ಪೊಲೀಸ್ ಅಧಿಕಾರಿ ಕೋಡಿ ಹಬಾರ್ಡ್ ಸ್ಥಳಕ್ಕೆ ಧಾವಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೋಡಿ ಹಬಾರ್ಡ್ ಪುತ್ರಿ ಕೂಡ ಇದೇ ರೀತಿಯ ಸಂಕಷ್ಟದಲ್ಲಿ ಸಿಲುಕಿಹಾಕಿಕೊಂಡಿದ್ದರಿಂದ ಕೋಡಿ ಹಬಾರ್ಡ್ಗೆ ಪರಿಸ್ಥಿತಿಯ ಅನುಭವವಿತ್ತು. ಹೀಗಾಗಿ ಅವರು ಮಗುವನ್ನ ಓಲ್ಟಾ ತಿರುಗಿಸಿ ಅದು ಮೆಡಿಸಿನ್ನ್ನು ಹೊರಗೆ ಕಕ್ಕುವವರೆಗೂ ಬೆನ್ನಿಗೆ ತಟ್ಟುತ್ತಿದ್ದರು. ಕೋಡಿ ಹಬಾರ್ಡ್ ಪ್ರಯತ್ನ ಯಶಸ್ವಿಯಾಗಿದ್ದು ಮಗು ಔಷಧಿಯನ್ನ ಬಾಯಿಯಿಂದ ಕಕ್ಕಿ ಬಳಿಕ ಅಳಲು ಆರಂಭಿಸಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಗುವಿನ ಪ್ರಾಣ ಕಾಪಾಡಿದ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗ್ತಿದೆ.
https://www.facebook.com/photo.php?fbid=251766223389410&set=a.113274180571949&type=3