ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಸೇವಾ ಶುಲ್ಕ ಪರಿಷ್ಕರಿಸಲು ಮುಂದಾಗಿದೆ. ಹೊಸ ಶುಲ್ಕಗಳು ಎಟಿಎಂ ವಿತ್ ಡ್ರಾ, ಚೆಕ್ಬುಕ್ಗಳು, ಹಣ ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಅನ್ವಯಿಸಲಿದೆ. ಹೊಸ ಶುಲ್ಕಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ.
ಮಾನ್ಯ ಕೆವೈಸಿ ದಾಖಲೆಗಳನ್ನು ಒದಗಿಸುವ ಯಾರಾದರೂ ಎಸ್ಬಿಐ ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಎಸ್ಬಿಐನ ಬಿಎಸ್ಬಿಡಿ ಖಾತೆಗೆ ಕನಿಷ್ಠ ಬಾಕಿ ಶೂನ್ಯವಾಗಿದೆ. ಈ ಖಾತೆಗೆ ಗರಿಷ್ಠ ಮೊತ್ತದ ಮಿತಿಯಿಲ್ಲ ಬಿಎಸ್ಬಿಡಿ ಖಾತೆದಾರರಿಗೆ ಮೂಲ ರುಪೇ ಎಟಿಎಂ-ಕಮ್ -ಡೆಬಿಟ್ ಕಾರ್ಡ್ ನೀಡಲಾಗುವುದು.
ಎಟಿಎಂ ಅಥವಾ ಶಾಖೆಯಿಂದ ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಮಿತಿ ನಿಗದಿಪಡಿಸಿದೆ. ನಾಲ್ಕು ಬಾರಿ ಉಚಿತವಾಗಿ ನಗದು ವಿತ್ ಡ್ರಾ ಮಾಡಬಹುದು. ಇದಕ್ಕಿಂತ ಹೆಚ್ಚಿನ ವಿತ್ ಡ್ರಾಗೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ನಾಲ್ಕು ಉಚಿತ ವಿತ್ ಡ್ರಾ ನಂತ್ರ ಎಸ್ಬಿಐ ಎಟಿಎಂನಲ್ಲಿ ಪ್ರತಿ ವಿತ್ ಡ್ರಾಗೆ 15 ರೂಪಾಯಿ ಶುಲ್ಕ ವಿಧಿಸಲಾಗುವುದು. ಎಸ್ಬಿಐ ಅಲ್ಲದ ಎಟಿಎಂನಲ್ಲಿ ಪ್ರತಿ ವಿತ್ ಡ್ರಾಗೆ 15 ರೂಪಾಯಿ ಜೊತೆ ಜಿಎಸ್ಟಿ ವಿಧಿಸಲಾಗುವುದು.
ಎಸ್ಬಿಐ, ಬಿಎಸ್ಬಿಡಿ ಖಾತೆದಾರರಿಗೆ 10 ಚೆಕ್ ಬುಕ್ ಗಳನ್ನು ಉಚಿತವಾಗಿ ನೀಡುತ್ತದೆ. ಅದರ ನಂತರ ಬ್ಯಾಂಕ್ 10 ಪೇಜ್ ನ ಚೆಕ್ ಬುಕ್ ಪುಸ್ತಕಗಳಿಗೆ 40 ರೂಪಾಯಿ ಜೊತೆಗೆ ಜಿಎಸ್ಟಿ ಶುಲ್ಕ ವಿಧಿಸುತ್ತದೆ. 25 ಪೇಜ್ ನ ಚೆಕ್ ಪುಸ್ತಕಗಳಿಗೆ 75 ರೂಪಾಯಿ ವಿಧಿಸುತ್ತದೆ.
ತುರ್ತು ಚೆಕ್ ಬುಕ್ ಗಳಿಗೂ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. 10 ಪೇಜ್ ನ ಚೆಕ್ ಬುಕ್ ಗೆ 50 ರೂಪಾಯಿ ಜೊತೆಗೆ ಜಿಎಸ್ಟಿ ವಿಧಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕಗಳ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.