ಟೆಕ್ಸಾಸ್‌ನ ಹೂಸ್ಟನ್ ಕೌಂಟಿಯ ಕಲಾ ಶಿಕ್ಷಕಿಯೊಬ್ಬರು ತಮ್ಮ ಕಾರಿನಲ್ಲಿ ಕರಿ ಕರಡಿಯೊಂದನ್ನು ಕಂಡು ಜೀವಮಾನದ ಶಾಕ್‌ಗೆ ಒಳಗಾಗಿದ್ದಾರೆ.
ಮೇರಿ ಜೇನ್ ಯಾರ್‌ಬರೋ ಹೆಸರಿನ ಈ ಶಿಕ್ಷಕಿ, ಹೂಸ್ಟನ್ ನಗರದ ವಾರ್ನರ್ ರಾಬಿನ್ಸ್ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಪಾರ್ಕ್ ಮಾಡಲಾಗಿದ್ದ ತಮ್ಮ ಕಾರಿನಲ್ಲಿ ಕರಡಿ ಬಂದು ದಾಂಧಲೆ ಮಾಡುತ್ತಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಕರಡಿಯ ಕಾಟಕ್ಕೆ ಕಾರಿನ ಒಳಾಂಗಣವೆಲ್ಲಾ ಛಿದ್ರವಾಗಿದೆ.
ಟೆನ್ನೆಸ್ಸೆಯ ಗಾಟ್ಲಿನ್‌ಬರ್ಗ್ನಲ್ಲಿ ಮುಂದಿನ ವರ್ಷದ ಶೈಕ್ಷಣಿಕ ಸೆಶೆನ್‌ನ ಕ್ಲಾಸ್ ತೆಗೆದುಕೊಳ್ಳಲೆಂದು ಜೇನ್ ಆಗಮಿಸಿದ್ದರು. ಆ ವೇಳೆ ಪಾರ್ಕಿಂಗ್ ಲಾಟ್‌ನಲ್ಲಿ ತಮ್ಮ ಕಾರು ನಿಲ್ಲಿಸಿದ್ದರು ಜೇನ್. ಆ ವೇಳೆ ಕಾರಿನ ಬಾಗಿಲನ್ನು ತೆಗೆಯಲು ಕರಡಿ ಪ್ರಯತ್ನಿಸಿದೆ. ಈ ವೇಳೆ ಕರಡಿಯನ್ನು ಗಮನಿಸಿದ ಜೇನ್‌ರ ನಾಯಿ, ಬೊಗಳಲು ಆರಂಭಿಸಿದೆ. ಆಗ ಕಾರಿನ ಬಳಿ ಬಂದ ಜೇನ್ ಏನಾಗುತ್ತಿದೆ ಎಂದು ಗಮನಿಸಿದಾಗ ಕರಡಿಯು ತನ್ನ ಕಾರಿನ ಒಳಾಂಗಣವನ್ನು ಛಿದ್ರಗೊಳಿಸುತ್ತಿರುವುದನ್ನು ಗಮನಿಸಿದ್ದಾರೆ.