ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಿದ ಸ್ಪೇಸ್ಎಕ್ಸ್ ಗಗನನೌಕೆ: ವಿಡಿಯೋ ವೈರಲ್ 07-06-2021 7:57AM IST / No Comments / Posted In: Featured News, Live News, International ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಸನಿಹಕ್ಕೆ ಧಾವಿಸುತ್ತಿರುವ ಸ್ಪೇಸ್ಎಕ್ಸ್ ಮರುಬಳಕೆ ಸರಕು ಸಾಗಾಟದ ಗಗನನೌಕೆ ’ಸ್ಪೇಸ್ಎಕ್ಸ್ ಡ್ರಾಗನ್’ ಗಗನಕ್ಕೆ ಚಿಮ್ಮುತ್ತಿರುವ ವಿಡಿಯೋ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆಂದು ಈ ಗಗನನೌಕೆ ಪ್ರಯಾಣ ಬೆಳೆಸಿದೆ ಎಂದು ನಾಸಾ ತಿಳಿಸಿದೆ. ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು ನಾಸಾ, “ಸ್ಪೇಸ್ಎಕ್ಸ್ ಕಾರ್ಗೋ ಡ್ರಾಗನ್ ದಿನದ ವೇಳೆಯೇ ಗಗನಕ್ಕೆ ಹಾರಿದ್ದು, ಬಾಹ್ಯಾಕಾಶ ಕೇಂದ್ರದಲ್ಲಿ ಡಾಕಿಂಗ್ ಆಗಲು ಹೊರಟಿದೆ” ಎಂದು ತಿಳಿಸಿದೆ. ವೈಜ್ಞಾನಿಕ ಪ್ರಯೋಗದ ಉಪಕರಣಗಳು, ನಿಂಬೆಹಣ್ಣು, ಈರುಳ್ಳಿ, ಅವೋಕ್ಯಾಡೋಗಳು, ಚೆರ್ರಿ ಟೊಮ್ಯಾಟೋಗಳು ಹಾಗೂ ಇತರೆ ಸರಕು ಸೇರಿಕೊಂಡು ಒಟ್ಟಾರೆ 7,300 ಪೌಂಡ್ (3300 ಕಿಲೋಗ್ರಾಂ) ಪೇಲೋಡ್ ಅನ್ನು ಸ್ಪೇಸ್ಎಕ್ಸ್ ಗಗನನೌಕೆ ಹೊತ್ತೊಯ್ಯುತ್ತಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸದ್ಯ ಏಳು ಗಗನಯಾನಿಗಳು ಇದ್ದಾರೆ. The @SpaceX cargo Dragon flies into orbital daytime as it continues approach to the @Space_Station for docking this morning: pic.twitter.com/AbuLLzrXCq — NASA (@NASA) June 5, 2021