ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದ್ದು, ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕಿಂಗ್ ಉದ್ದೇಶಗಳಿಗೂ ಸಹ ಈ ಕಾರ್ಡ್ ನೆರವಾಗಲಿದೆ.
ಇದೇ ವೇಳೆ ಎಸ್ಎಂಎಸ್ ಮೂಲಕ ಆಧಾರ್ ಸೇವೆಗಳನ್ನು ಒದಗಿಸಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮುಂದಾಗಿದೆ. ಇದರಿಂದಾಗಿ ಅಂತರ್ಜಾಲ ಸೇವೆಗಳು ಇಲ್ಲದೇ ಇದ್ದರೂ ಸಹ ಆಧಾರ್ ಸೇವೆಗಳನ್ನು ಬಳಸಬಹುದಾಗಿದೆ.
ವರ್ಚುವಲ್ ಐಡಿ ಸೃಷ್ಟಿ/ಆಧಾರ್ ಲಾಕ್/ಅನ್ಲಾಕಿಂಗ್, ಬಯೋಮೆಟ್ರಿಕ್ ಲಾಕ್ ಹಾಗೂ ಅನ್ಲಾಕಿಂಗ್ ಪ್ರಕ್ರಿಯೆಗಳನ್ನು ಎಸ್ಎಂಎಸ್ ಮೂಲಕ ಮಾಡಿಕೊಳ್ಳಬಹುದಾಗಿದೆ.
ಇಂಥ ಸೌಲಭ್ಯಗಳನ್ನು ಪಡೆದುಕೊಳ್ಳಲು, ಬಳಕೆದಾರರು ಮೊದಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1947ಕ್ಕೆ ಎಸ್ಎಂಎಸ್ ಹಾಗೂ ಫಾರ್ಮ್ಯಾಟ್ ಕಳುಹಿಸಬೇಕು.
ವರ್ಚುವಲ್ ಐಡಿಗಾಗಿ GVID ಟೈಪ್ ಮಾಡಿ, ಸ್ಪೇಸ್ ಕೊಟ್ಟು, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಬೇಕು.
ವರ್ಚುವಲ್ ಐಡಿಯನ್ನು ಮರಳಿ ಪಡೆಯಲು RVID ಟೈಪ್ ಮಾಡಿ, ಸ್ಪೇಸ್ ಕೊಟ್ಟು, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಬೇಕು.
ಒನ್ ಟೈಂ ಪಾಸ್ವರ್ಡ್ ಪಡೆಯಲು GET OTP ಟೈಪ್ ಮಾಡಿ, ಸ್ಪೇಸ್ ಕೊಟ್ಟು, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಬೇಕು.
ಒಟಿಪಿ ಪಡೆಯಲು ವರ್ಚುವಲ್ ಐಡಿ ಬಳಸುವುದಾದರೆ GET OTP ಟೈಪ್ ಮಾಡಿ, ನಿಮ್ಮ ವರ್ಚುವಲ್ ಐಡಿ ಸಂಖ್ಯೆಯ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಬೇಕು.
ಆಧಾರ್ ಲಾಕ್ ಮಾಡಬೇಕಾದಲ್ಲಿ: GET OTP ಟೈಪ್ ಮಾಡಿ, ಸ್ಪೇಸ್ ಕೊಟ್ಟು, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಬೇಕು. ನಂತರ LOCK UID ಟೈಪ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಮತ್ತು ಒಟಿಪಿಯ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ.
ಇದೇ ರೀತಿ ಆಧಾರ್ ಸಂಖ್ಯೆಯ ಅನ್ಲಾಕಿಂಗ್ ಮಾಡಲು: GET OTP-ವರ್ಚುವಲ್ ಐಡಿಯ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ. ನಂತರ UNLOCK UID-Virtual-ವರ್ಚುವಲ್ ಐಡಿಯ ಕೊನೆಯ ಆರು ಅಂಕಿಗಳು-ಒಟಿಪಿಯ 6 ಅಂಕಿಗಳು.