alex Certify ITR ಸಲ್ಲಿಸಲು ಹೊಸ ಪೋರ್ಟಲ್‌: ಏನಿದರ ವಿಶೇಷತೆ…? ಇಲ್ಲಿದೆ ಈ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ITR ಸಲ್ಲಿಸಲು ಹೊಸ ಪೋರ್ಟಲ್‌: ಏನಿದರ ವಿಶೇಷತೆ…? ಇಲ್ಲಿದೆ ಈ ಕುರಿತ ಮಾಹಿತಿ

ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌‌ ಅನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ಆನ್ಲೈನ್ ಪೋರ್ಟಲ್‌ www.incometax.gov.in ಗೆ ಚಾಲನೆ ಕೊಡುತ್ತಿದೆ.

ಜೂನ್ 7ರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಈ ಹೊಸ ಪೋರ್ಟಲ್ ಬಳಸಲಿದ್ದಾರೆ. ಇಂದು ಬಿಡುಗಡೆಯಾಗಲಿರುವ ಈ ಪೋರ್ಟಲ್‌ನಲ್ಲಿ ತೆರಿಗೆ ರಿಟರ್ನ್ಸ್‌ಗಳ ತ್ವರಿತ ಪ್ರಕ್ರಿಯೆಗಳು ಆಗಲಿದ್ದು ಇಂಟರಾಕ್ಟೀವ್‌ ಯುಐ ಮುಖಾಂತರ ರೀಫಂಡ್‌ಗಳು ಸಹ ಬಹಳ ಬೇಗ ಆಗಲಿವೆ.

ಆದಾಯ ತೆರಿಗೆಯ ಹೊಸ ಪೋರ್ಟಲ್‌ನ ಐದು ಪ್ರಮುಖ ಫೀಚರ್‌ಗಳು ಇಂತಿವೆ.

1. ತೆರಿಗೆ ಪಾವತಿದಾರ ಸ್ನೇಹಿ

ನಿಮ್ಮ ತೆರಿಗೆ ರಿಟರ್ನ್ಸ್‌ಅನ್ನು ಶೀಘ್ರವಾಗಿ ಸಂಸ್ಕರಿಸಲಿರುವ ಕಾರಣ ರೀಫಂಡ್‌ಗಳು ತ್ವರಿತವಾಗಿ ಲಭ್ಯವಾಗಲಿವೆ.

2. ಸರಳ ಹಾಗೂ ಒಂದೇ ಡ್ಯಾಶ್‌ಬೋರ್ಡ್

ತೆರಿಗೆ ಪಾವತಿ ಪ್ರಕ್ರಿಯೆಗಳನ್ನು ಸರಳಗೊಳಿಸಲು ಒಂದೇ ಡ್ಯಾಶ್‌ಬೋರ್ಡ್ ಫೀಚರ್‌ ಪರಿಚಯಿಸಲಿರುವ ಐಟಿ ಇಲಾಖೆ, ಬಹು ವ್ಯವಹಾರಗಳು ಹಾಗೂ ಅಪ್ಲೋಡ್‌ಗಳಿಗೆ ಏಕ ಸಂಪರ್ಕ ಬಿಂದು ಒದಗಿಸಲಿದ್ದು, ತೆರಿಗೆ ಪಾವತಿದಾರರು ತಮ್ಮ ವಿನಂತಿಗಳನ್ನು ಪೋರ್ಟಲ್‌ನಲ್ಲಿ ಆರಾಮವಾಗಿ ಫಾಲೋ ಅಪ್ ಮಾಡಬಹುದಾಗಿದೆ.

3. ತೆರಿಗೆ ರಿಟರ್ನ್ಸ್ ಫೈಲಿಂಗ್‌ಗೆ ಮೊಬೈಲ್ ಅಪ್ಲಿಕೇಶನ್‌ ?

ತೆರಿಗೆ ಪಾವತಿಯ ಹೊಸ ವ್ಯವಸ್ಥೆಯನ್ನು ಜೂನ್ 18ರಂದು ಲಾಂಚ್ ಮಾಡಲು ನೇರ ತೆರಿಗೆ ಮಂಡಳಿ ಯೋಜಿಸುತ್ತಿದೆ. ಇದೇ ವೇಳೆ ಮೊಬೈಲ್ ಅಪ್ಲಿಕೇಶನ್‌ ಅನ್ನು ಲಾಂಚ್ ಮಾಡಲು ಪೋರ್ಟಲ್‌ನೊಂದಿಗೆ ಲಾಂಚ್‌ ಮಾಡಲು ಮಂಡಳಿ ಚಿಂತನೆ ನಡೆಸಿದೆ.

4. ಆದಾಯ ತೆರಿಗೆ ಸಿದ್ಧತೆ ಸಾಫ್ಟ್‌ವೇರ್‌

ಮುಂಬರಲಿರುವ ಪೋರ್ಟಲ್‌ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಿದ್ಧತೆ ಸಾಫ್ಟ್‌ವೇರ್‌ ಇರಲಿದ್ದು, ಇದನ್ನು ತೆರಿಗೆದಾರರಿಗೆ ನಿಶ್ಶುಲ್ಕವಾಗಿ ಒದಗಿಸಲಾಗುವುದು. “ಐಟಿಆರ್‌ 1, 4 (ಆನ್ಲೈನ್ ಮತ್ತು ಆಫ್ಲೈನ್) ಮತ್ತು ಐಟಿಆರ್‌ 2 (ಆಫ್ಲೈನ್) ವಿಚಾರದಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಉಚಿತವಾಗಿ ಐಟಿಆರ್‌ ಸಿದ್ಧತೆಯ ಸಾಫ್ಟ್‌ವೇರ್‌ ಒದಗಿಸಲಾಗುವುದು. ಐಟಿಆರ್‌ 3, 5, 6, 7ಕ್ಕೆ ಸಿದ್ಧತೆ ಮಾಡಿಕೊಳ್ಳಲು ವ್ಯವಸ್ಥೆಗಳನ್ನು ಶೀಘ್ರವೇ ಒದಗಿಸಲಾಗುವುದು” ಎಂದು ಸಿಬಿಡಿಟಿ ತಿಳಿಸಿದೆ.

5. ಗ್ರಾಹಕ ಸೇವಾ ಸೌಲಭ್ಯ

ಐಟಿಆರ್‌ ಸಲ್ಲಿಕೆ ವೇಳೆ ಪ್ರಶ್ನೆಗಳೇನಾದರೂ ಇದ್ದಲ್ಲಿ ತೆರಿಗೆ ಪಾವತಿದಾರರು ಕಾಲ್ ಸೆಂಟರ್‌ಗೆ ಕರೆ ಮಾಡಬಹುದಾಗಿದೆ. ವಿವರವಾದ ಪ್ರಶ್ನೋತ್ತರಗಳು, ಬಳಕೆದಾರರ ಮ್ಯಾನುವಲ್‌ಗಳು, ವಿಡಿಯೋಗಳು ಹಾಗೂ ಚಾಟ್‌ಬೋಟ್‌ ಅಥವಾ ಲೈವ್ ಏಜೆಂಟ್‌ಗಳ ವ್ಯವಸ್ಥೆಯನ್ನು ಒದಗಿಸುವುದಾಗಿ ವಿತ್ತ ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...