ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಜೀವದ ಹಂಗುತೊರೆದು ಮುಂಚೂಣಿ ವಾರಿಯರ್ಸ್ ಆಗಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ.
ರಾಜ್ಯದ 42,574 ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂಪಾಯಿಯಂತೆ ಒಟ್ಟು 12.75 ಕೋಟಿ ರೂ ಪಾವತಿಸಲು ಮಂಜೂರು ಮಾಡಿದೆ.
ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಕಳೆದ ಮೂರು ತಿಂಗಳಿಂದ ವೇತನವೂ ಇಲ್ಲದೇ ದುಡಿಯುತ್ತಿದ್ದ ಆಶಾಕಾರ್ಯಕರ್ತರು ಪರಿಹಾರ ಹಣ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಆರ್ಥಿಕ ಪ್ಯಾಕೇಜ್ -2 ರಲ್ಲಿ ತಲಾ 3,000 ಪರಿಹಾರ ಘೋಷಿಸಿದೆ.