ಬೆಂಗಳೂರು: ಗೂಗಲ್ ಬಳಿಕ ಇದೀಗ ಅಮೆಜಾನ್ ನಿಂದಲೂ ಕನ್ನಡಕ್ಕೆ ಅಪಮಾನ ಮಾಡಲಾಗಿದ್ದು, ಕನ್ನಡ ಬಾವುಟದಲ್ಲಿ ಒಳ ಉಡುಪು ತಯಾರಿಸಿ ಅಮೆಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಕನ್ನಡ ಬಾವುಟದ ಬಣ್ಣದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ ಅದರ ಮೇಲೆ ಕನ್ನಡ ಧ್ವಜ ಲಾಂಛನ, ಭಾರತದ ಅಶೋಕ ಚಕ್ರ, ಬಳಕೆ ಮಾಡಲಾಗಿದೆ. ಈ ಮೂಲಕ ಕನ್ನಡಿಗರಿಗೆ ಅಮೆಜಾನ್ ಕಂಪನಿ ಅಪಮಾನ ಮಾಡುತ್ತಿದೆ. ಇದು ಕನ್ನಡಿಗರಿಗೆ ನೋವುಂಟು ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮಚ್ಚು ಹಿಡಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು, ಗೃಹ ಸಚಿವರು ಇಂತಹ ದುಷ್ಟ ಶಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.