ನಾಯಿ, ಬೆಕ್ಕು, ಹಸು, ಆನೆ ಹೀಗೆ ಪ್ರಾಣಿಗಳ ಮೇಲೆ ಮನುಷ್ಯ ವಿಶೇಷ ಬಾಂಧವ್ಯವನ್ನ ಹೊಂದಿರೋದನ್ನ ನೀವು ನೋಡೇ ಇರ್ತೀರಿ. ಆದರೆ ಎಂದಾದರೂ ಕೀಟಗಳ ಮೇಲೆ ವಿಶೇಷ ಪ್ರೀತಿಯುಳ್ಳ ವ್ಯಕ್ತಿಯನ್ನ ಕಂಡಿದ್ದೀರಾ..? ಅದರಲ್ಲೂ ಜಿರಳೆಯ ಮೇಲೆ ಕಾಳಜಿಯುಳ್ಳು ವ್ಯಕ್ತಿಯ ಬಗ್ಗೆ ತಿಳಿದಿದ್ದೀರಾ..?
ಸಾಮಾನ್ಯವಾಗಿ ಮನೆಯಲ್ಲಿ ಜಿರಳೆ ಕಾಣಿಸಿಕೊಳ್ತು ಅಂದರೆ ಅದನ್ನ ಸಾಯಿಸುವವರ ಸಂಖ್ಯೆಯೇ ಹೆಚ್ಚು. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಗಾಯಗೊಂಡಿದ್ದ ಜಿರಳೆಯನ್ನ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಥೈಲ್ಯಾಂಡ್ನ ವ್ಯಕ್ತಿಯೊಬ್ಬ ಜಿರಳೆಯನ್ನ ಹಿಡಿದುಕೊಂಡು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದೌಡಾಯಿಸಿದ್ದಾನೆ. ರಸ್ತೆಯ ಮೇಲೆ ಯಾರೋ ಜಿರಳೆಯನ್ನ ಮೆಟ್ಟಿದ್ದನ್ನ ಕಂಡ ಈ ವ್ಯಕ್ತಿ ಜಿರಳೆಯನ್ನ ಹಾಗೇ ಬಿಡದೇ ಅದನ್ನ ಎತ್ತಿಕೊಂಡು ಸೀದಾ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಫೇಸ್ಬುಕ್ನಲ್ಲಿ ಥೈಲ್ಯಾಂಡ್ನ ವೈದ್ಯ ಈ ವಿಚಾರವನ್ನ ಶೇರ್ ಮಾಡಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೇ ಈ ವ್ಯಕ್ತಿಯ ದಯಾಗುಣಕ್ಕೆ ತಲೆಬಾಗಿದ್ದಾರೆ.