alex Certify ಕೊರೊನಾ ಜಾಗೃತಿ ಮೂಡಿಸುವ ವೆಬ್​ ಗೇಮ್​ ಆವಿಷ್ಕರಿಸಿದ ಬೆಂಗಳೂರು ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಜಾಗೃತಿ ಮೂಡಿಸುವ ವೆಬ್​ ಗೇಮ್​ ಆವಿಷ್ಕರಿಸಿದ ಬೆಂಗಳೂರು ಬಾಲಕ..!

ಕೋವಿಡ್​ 19 ಸೋಂಕನ್ನ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಆದೇಶವನ್ನ ಜೂನ್​ 14ರವರೆಗೆ ವಿಸ್ತರಣೆ ಮಾಡಿದೆ. ಈ ಲಾಕ್​ಡೌನ್​ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಬನ್ನಿ. ಕೊರೊನಾ ತಡೆಗೆ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಾಪಾಡಿ ಎಂದೆಲ್ಲ ಹೇಳುತ್ತಲೇ ಇದೆ.

ಅದೇ ರೀತಿ ಬೆಂಗಳೂರಿನ 14 ವರ್ಷದ ಬಾಲಕ ಕೂಡ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಇದಕ್ಕಾಗಿ ವಿಭಿನ್ನ ಮಾರ್ಗವನ್ನ ಕಂಡುಕೊಂಡಿದ್ದಾನೆ. ಇದಕ್ಕಾಗಿ ಹೊಸ ವೆಬ್​ ಗೇಮ್​ನ್ನು ಕಂಡು ಹಿಡಿದಿರುವ ಬಾಲಕ ಇದರಲ್ಲಿ ಕೋವಿಡ್​ ವಿರುದ್ಧ ಜಾಗೃತಿ ಮೂಡಿಸಿದ್ದಾನೆ.

ಅಭಿನವ್​​ ರಂಜಿತ್​ ದಾಸ್​​ ಎಂಬಾತ ʼಗೊ ಕೊರೊನಾ ಗೊʼ ಎಂಬ ಹೆಸರಿನ ವೆಬ್​ ಗೇಮ್​ನ್ನು ಕಂಡುಹಿಡಿದಿದ್ದಾನೆ. ಈ ಗೇಮಿನಲ್ಲಿ ಮೂರು ಸುತ್ತುಗಳಿದ್ದು ಇದರಲ್ಲಿ ಮಾಸ್ಕ್, ಸ್ಯಾನಿಟೈಸರ್​​ ಬಳಕೆ​ ಹಾಗೂ ಪಿಪಿಇ ಕಿಟ್​ಗಳನ್ನ ಧರಿಸಿ ವೈರಸ್​ ವಿರುದ್ಧ ಹೋರಾಡಬೇಕು ಅಂತಿಮ ಸುತ್ತನ್ನ ಪೂರೈಸಿದ ಆಟಗಾರನಿಗೆ ರಿವಾರ್ಡ್ ರೂಪದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ರೀತಿಯಲ್ಲಿ ಗೇಮ್​ನ್ನು ವಿನ್ಯಾಸಗೊಳಿಸಿದ್ದಾನೆ.

ಪ್ರಸ್ತುತ ಜಗತ್ತಿನಲ್ಲಿರುವ ವಾಸ್ತವ ಪರಿಸ್ಥಿತಿ ನನಗೆ ಈ ರೀತಿ ಗೇಮ್​ನ್ನು ವಿನ್ಯಾಸ ಮಾಡುವ ಐಡಿಯಾ ನೀಡಿತು. ಈ ಗೇಮ್​ನಿಂದ ಟೈಮ್​ ಪಾಸ್​ ಆಗೋದು ಮಾತ್ರವಲ್ಲದೇ ಕೊರೊನಾ ವಿರುದ್ಧ ಯಾವ ರೀತಿಯಲ್ಲಿ ಹೋರಾಡಬೇಕು ಎಂಬ ಜಾಗೃತಿಯನ್ನೂ ಈ ಗೇಮ್​ ಮೂಡಿಸಲಿದೆ ಎಂದು ಅಭಿನವ್​ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...