ನಟಿ ಯಾಮಿ ಗೌತಮ್ ಹಾಗೂ ನಿರ್ದೇಶಕ ಆದಿತ್ಯಾ ಧಾರ್ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಕಾರ್ಯಕ್ರಮದ ಚಿತ್ರವೊಂದನ್ನು ಯಾಮಿ ತಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಕುಟುಂಬಸ್ಥರ ಹಾರೈಕೆಯಿಂದ ನಾವಿಂದು ಸುಂದರ ಸಮಾರಂಭವೊಂದರಲ್ಲಿ ಮದುವೆ ಮಾಡಿಕೊಂಡಿದ್ದೇವೆ. ಪ್ರೇಮ ಹಾಗೂ ಸ್ನೇಹದ ಹೊಸ ಪಯಣಕ್ಕೆ ಕಾಲಿಡುತ್ತಿರುವ ನಾವು ನಿಮ್ಮ ಹಾರೈಕೆಗಳು ಹಾಗು ಆಶೀರ್ವಾದ ಬಯಸುತ್ತೇವೆ” ಎಂದು ತಮ್ಮ ಹಾಗೂ ತಮ್ಮ ಪತಿಯ ಪರವಾಗಿ ಮದುವೆಯ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ ಯಾಮಿ.
ಮುಂಬರಲಿರುವ ’ಭೂತ್ ಪೊಲೀಸ್’ ಚಿತ್ರದಲ್ಲಿ ಯಾಮಿ ಕಾಣಿಸಿಕೊಳ್ಳಲಿದ್ದು, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದೇ ವೇಳೆ ’ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಚಿತ್ರದಲ್ಲಿ ವಿಕಿ ಕೌಶಲ್ರನ್ನು ನಾಯಕನ ಪಾತ್ರದಲ್ಲಿ ಹಾಕಿಕೊಂಡು ನಿರ್ಮಾಣ ಮಾಡಲಿದ್ದಾರೆ ಆದಿತ್ಯ.