ತೈವಾನ್ ಬಂದರೊಂದರಲ್ಲಿ ನಿಂತಿದ್ದ ಕ್ರೇನ್ ಒಂದಕ್ಕೆ 80,000-ಟನ್ ಸಾಮರ್ಥ್ಯದ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಕ್ರೇನ್ ನಜ್ಜುಗುಜ್ಜಾಗಿದೆ. ದಕ್ಷಿಣ ತೈವಾನ್‌ನ ಕಾವೋಸುಯಿಂಗ್‌ನಲ್ಲಿ ಲಂಗರು ಹಾಕಲು ಸಜ್ಜಾಗುತ್ತಿದ್ದ ಈ ಹಡಗು ಹೀಗೆ ಕ್ರೇನ್‌ಗೆ ಡಿಕ್ಕಿ ಹೊಡೆದಿದೆ.
ಸರಕು ಸಾಗಾಟದ ಈ ಹಡಗು ಓರಿಯಂಟ್ ಓವರ್‌ಸೀಸ್ (ಇಂಟರ್ನ್ಯಾಷನಲ್) ಲಿ.ಗೆ ಸೇರಿದ್ದು, ಬಂದರಿನತ್ತ ಅಪಾಯಕಾರಿಯಾಗಿ ತಿರುಗಿದ ಕಾರಣ ಓವರ್‌ಹೆಡ್ ಕ್ರೇನ್ ಒಂದಕ್ಕೆ ಡಿಕ್ಕಿ ಹೊಡೆದ ದೃಶ್ಯವನ್ನು ಕ್ಯಾಮೆರಾಗಳು ಸೆರೆ ಹಿಡಿದಿವೆ.
ಡಿಕ್ಕಿ ಹೊಡೆದ ಬಿರುಸಿಗೆ ಕ್ರೇನ್ ಸರಕಿನ ಕಂಟೇನರ್‌ಗಳಿಗೆ ಅಪ್ಪಳಿಸಿದ್ದು, ಬಂದರಿನ ಕೆಲಸಗಾರರು ತಮ್ಮ ಜೀವ ಉಳಿಸಿಕೊಳ್ಳಲು ಎದ್ದು ಬಿದ್ದು ಓಡಿಹೋಗಿದ್ದಾರೆ. ಘಟನೆ ಬಳಿಕ ಅಪಘಾತದ ಸ್ಥಳವನ್ನು ಸೀಲ್ ಮಾಡಲಾಗಿದ್ದು, ರಿಪೇರಿ ಕಾರ್ಯಗಳು ಸಾಗಿವೆ.
https://twitter.com/fivesevenfiend/status/1400453255520395273?ref_src=twsrc%5Etfw%7Ctwcamp%5Etweetembed%7Ctwterm%5E1400453255520395273%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fship-hits-crane-at-taiwanese-port-sends-it-crashing-down-watch%2F766276