ಬುಡಕಟ್ಟು ಜನಾಂಗದವರು ಕಲಿಕೆಯಲ್ಲಿ, ಉದ್ಯೋಗದಲ್ಲಿ ಹಿಂದುಳಿದಿದ್ದರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರಿಲ್ಲ. ಆದರೆ ಸುಕುಮಾರನ್ ಟಿಸಿ ಎಂಬ ಸಾಮಾನ್ಯ ವ್ಯಕ್ತಿ ಈ ಮಾತಿಗೆ ವಿರುದ್ಧವಾಗಿ ನಿಂತಿದ್ದಾರೆ.
ಬುಡಕಟ್ಟು ಜನಾಂಗದವರು ಇರುವ ಕಡೆ ಶಿಕ್ಷಕ ವೃತ್ತಿ ಮಾಡಲು ಅನೇಕರು ಹಿಂದೇಟು ಹಾಕುವ ಈ ಕಾಲದಲ್ಲಿ ಸುಕುಮಾರನ್ ಮಾತ್ರ ಕಟ್ಟುನಾಯ್ಕರ್ ಸಮುದಾಯಕ್ಕೆ ಬರೋಬ್ಬರಿ 14 ವರ್ಷಗಳಿಂದ ಪಾಠ ಮಾಡ್ತಿದ್ದಾರೆ.
2001ರ ಜನವರಿ 1ನೇ ತಾರೀಖಿನಂದು ವಯಕುನಾಡಿನ ಚೆಕ್ಕಡಿಯ ಅರಣ್ಯ ಪ್ರದೇಶದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಪಾಠ ಕಲಿಸುವ ಜವಾಬ್ದಾರಿಯನ್ನ ಸುಕುಮಾರನ್ಗೆ ನೀಡಲಾಯ್ತು. ಬುಡಕಟ್ಟು ವಸಾಹತು ಪ್ರದೇಶದಲ್ಲಿ ಏನೂ ಇಲ್ಲದ ಕಾರಣ ಇದನ್ನ ಶಾಲೆ ಎಂದು ಕರೆಯಲಾಗೋದಿಲ್ಲ.
ಕೇರಳದ ಡಿಪಿಇಪಿ ಯೋಜನೆಯಿಂದಾಗಿ ಬುಡಕಟ್ಟು ಜನಾಂಗಕ್ಕೂ ಶಿಕ್ಷಣ ಸಿಗುವಂತೆ ಮಾಡಿದೆ. ಹೊರಗಿನ ಸಮುದಾಯದೊಂದಿಗೆ ಯಾವುದೇ ಸಂದರ್ಭ ಹೊಂದಿಲ್ಲದ ಜನರು ಮೊದಲ ಬಾರಿಗೆ ಸುಕುಮಾರನ್ರನ್ನ ಭೇಟಿ ಮಾಡಿದ್ದರು. ಇಲ್ಲಿಂದ ಶುರುವಾದ ಬರೋಬ್ಬರಿ 14 ವರ್ಷಗಳ ಕಾಲ ಸಾಗಿದ್ದು ಪ್ರತಿದಿನ 7 ಕಿಲೋಮೀಟರ್ ದೂರ ದಟ್ಟ ಕಾಡಿನಲ್ಲಿ ನಡೆದುಕೊಂಡೇ ಸಾಗಿ ಪಾಠ ಮಾಡ್ತಿದ್ದಾರೆ.