ಹೂವೆಂದರೆ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ..?ಅದರಲ್ಲೂ ಪ್ರೀತಿ , ಪ್ರೇಮ ಅಂತಾ ಇರೋರಿಗಂತೂ ಹೂವೆಂದರೆ ಅಚ್ಚುಮೆಚ್ಚೇ ಸರಿ. ಇದೇ ರೀತಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧನಿಗೆ ಹೂವನ್ನ ಉಡುಗೊರೆಯಾಗಿ ನೀಡಿದ್ದು ಇದನ್ನ ನೋಡಿ ವೃದ್ಧ ಸಂಭ್ರಮಿಸಿದ ಪರಿ ನೆಟ್ಟಿಗರ ಮನಗೆದ್ದಿದೆ.
ಇನ್ಸ್ಟಾಗ್ರಾಂ ಬಳಕೆದಾರ ಯೆಶಾಯ ಗಾರ್ಜಾ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಗಾರ್ಜಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನನ್ನ ಕರೆದು ಪುಷ್ಪಗುಚ್ಚವನ್ನ ನೀಡಿದ್ದಾರೆ.
ವೃದ್ಧನನ್ನ ಬಳಿಗೆ ಕರೆದ ಗಾರ್ಜಾ, ಕ್ಷಮಿಸಿ, ನಾನು ನಿಮ್ಮ ಟೊಪ್ಪಿಯನ್ನ ತುಂಬಾನೇ ಇಷ್ಟಪಟ್ಟಿದ್ದೇನೆ. ಹೀಗಾಗಿ ನಿಮಗೆ ಹೂವನ್ನ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪುಷ್ಪಗುಚ್ಚವನ್ನ ಸ್ವೀಕರಿಸಿದ ವೃದ್ಧ, ಧನ್ಯವಾದ ..! ನಾನು ಈ ಹೂವುಗಳನ್ನ ನನ್ನ ಪತ್ನಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ತಾನು ಮದುವೆಯಾಗಿ 30 ವರ್ಷವಾಗಿದೆ ಎಂಬ ವಿಚಾರವನ್ನ ವೃದ್ಧ ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಗಾರ್ಜಾ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಹಾಗೂ ನಿಮ್ಮ ಪತ್ನಿ ಇನ್ನೂ ಅನೇಕ ವರ್ಷಗಳ ಹೀಗೆ ಜೊತೆಯಾಗಿ ಬದುಕಿ ಎಂದು ಹರಸಿದ್ದಾರೆ. ಇದಕ್ಕೆ ವೃದ್ಧ ವ್ಹಾಹ್..! ವ್ಹಾವ್..! ಎಂದು ಹೇಳಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು 1.78 ಲಕ್ಷ ವೀವ್ಸ್ ಹಾಗೂ 17 ಸಾವಿರಕ್ಕೂ ಅಧಿಕ ಮಂದಿಯ ಲೈಕ್ಸ್ ಸಂಪಾದಿಸಿದೆ.
https://www.instagram.com/p/CPi_TN4AU_z/?utm_source=ig_web_copy_link