ನವದೆಹಲಿ: ಆಯುಷ್ಮಾನ್ ಖುರಾನಾ ಅವರ ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಅಭಿನಯಿಸಿದ್ದ ಸಹನಟಿ ರೈಂಕು ಸಿಂಗ್ ನಿಕುಂಬ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈಂಕು ಸಿಂಗ್ ನಿಕುಂಬ್ ಚೇತರಿಸಿಕೊಳ್ಳುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೇ 25 ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರೈಂಕು ಸಿಂಗ್ ನಿಕುಂಬ್ ಅವರು ಹೋಮ್ ಐಸೋಲೇಷನ್ ನಲ್ಲಿದ್ದರು. ಕೆಲವು ದಿನ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದರೂ ಜ್ವರ ಕಡಿಮೆಯಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾಮಾನ್ಯ ಕೋವಿಡ್ ವಾರ್ಡ್ ನಲ್ಲಿ ಇದ್ದ ಆಕೆಯನ್ನು ನಂತರ ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ, ಚೇತರಿಸಿಕೊಳ್ಳುತ್ತಿದ್ದ ಅಕ್ಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ರೈಂಕು ಸಿಂಗ್ ನಿಕುಂಬ್ ಸಹೋದರಿ ಚಂದಾ ತಿಳಿಸಿದ್ದಾರೆ.
2019 ರಲ್ಲಿ ಬಿಡುಗಡೆಯಾದ ಆಯುಷ್ಮಾನ್ ಖುರಾನಾ, ನುಶ್ರತ್ ಭರೂಚಾ ಅಭಿನಯದ ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಪ್ರಸಿದ್ಧರಾಗಿದ್ದ ರೈಂಕು ಸಿಂಗ್ ನಿಕುಂಬ್ 2021 ರ ಹಾಸ್ಯಚಿತ್ರ ‘ಹಲೋ ಚಾರ್ಲಿ’ ಯಲ್ಲಿ ನಟಿಸಿದ್ದಾರೆ.