ಲಂಡನ್: ಬ್ರಿಟನ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರದ ವತಿಯಿಂದ ಅನುಮತಿ ನೀಡಿದೆ.
ಫೈಜರ್ ಮತ್ತು ಬಯೋನ್ ಟೆಕ್ ಕಂಪನಿಗಳ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಇನ್ನು ಭಾರತದಲ್ಲಿ ಕೂಡ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ. ಪಾಟ್ನಾ ಏಮ್ಸ್ ಸೇರಿದಂತೆ ದೇಶದ ವಿವಿಧಡೆ 12 ರಿಂದ 18 ವರ್ಷ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಯೋಗಿಕ ದತ್ತಾಂಶ ಆಧರಿಸಿ ಮಕ್ಕಳಿಗೆ ಲಸಿಕೆ ನೀಡಲಾಗುವುದು.