ಬ್ರಿಟನ್ನ ಕೇಂಬ್ರಿಡ್ಜ್ಶೈರ್ ಹೆದ್ದಾರಿಯಲ್ಲಿ ಟ್ರಕ್ ಅಪಘಾತ ಸಂಭವಿಸಿದ ಜಾಗದಲ್ಲಿ ರಸ್ತೆ ತುಂಬಾ ಸಂಪೂರ್ಣ ಕೆಂಪಗಾಗಿತ್ತು. ಹೆದ್ದಾರಿ ತುಂಬೆಲ್ಲ ರಕ್ತ ಹರಿದಿದ್ಯಾ ಎಂದು ಪರಿಶೀಲನೆ ನಡೆಸಲು ಸುಮಾರು 37 ಕಿಲೋಮೀಟರ್ ದೂರದಿಂದಲೇ ಪೊಲೀಸರು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿದ್ದರು.
ಎರಡು ಟ್ರಕ್ಗಳು ಪರಸ್ಪರ ಡಿಕ್ಕಿ ಹೊಡೆದ ಜಾಗದಲ್ಲಿ ಇಷ್ಟೆಲ್ಲ ರಕ್ತ ಇರೋದನ್ನ ಕಂಡು ಕೆಲ ಕಾಲ ಪೊಲೀಸರು ಸಹ ದಿಗ್ಬ್ರಾಂತರಾಗಿದ್ದರು.
ಈ ಫೋಟೋಗಳು ಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ ಹೆಚ್ಚಿನ ತನಿಖೆ ವೇಳೆ ರಸ್ತೆಯಲ್ಲಿ ಚೆಲ್ಲಿರುವ ಈ ಕೆಂಪು ಮಾದರಿಯ ದ್ರವ ರಕ್ತವಲ್ಲ ಬದಲಾಗಿ ಟೊಮ್ಯಾಟೋ ಕೆಚಪ್ ಎಂದು ತಿಳಿದುಬಂದಿದೆ. ಅಲ್ಲದೇ ಈ ಅಪಘಾತದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೊಂದು ಟ್ರಕ್ನಲ್ಲಿ ಆಲಿವ್ ಎಣ್ಣೆ ಇದ್ದಿದ್ದರಿಂದ ಟೊಮ್ಯಾಟೋ ಕೆಚಪ್ ಈ ರೀತಿ ಹೆಚ್ಚು ದೂರದವರೆಗೆ ವ್ಯಾಪಿಸಲು ಕಾರಣವಾಗಿದೆ. ಸದ್ಯ ಸಣ್ಣ ಪುಟ್ಟ ಗಾಯದಿಂದ ಬಳಲುತ್ತಿರುವ ಚಾಲಕರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ರು.