alex Certify ನಗು ತರಿಸುತ್ತೆ ಪತ್ನಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಪತಿ ಮಾಡಿದ ಪ್ಲಾನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಪತ್ನಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಪತಿ ಮಾಡಿದ ಪ್ಲಾನ್​..!

ಮಿಜೊರಾಂನ ದಂಪತಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ವಿಚಿತ್ರ ಮಾರ್ಗವೊಂದನ್ನ ಹುಡುಕಿದ್ದು ವೈರಲ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಮಿಜೋರಾಂನ ಬಾಂಗ್‌ಕಾವ್ನ್​​ ನ ನಿವಾಸಿಯಾದ ಮಹಿಳೆಯೊಬ್ಬಳು ಕೋವಿಡ್​​ ಸೋಂಕಿಗೆ ಒಳಗಾಗಿದ್ದಳು. ಆಕೆಯ ಪತಿ ಕೊರೊನಾದ ಮಾರ್ಗಸೂಚಿಗಳನ್ನ ಪಾಲಿಸುತ್ತಾ ಆಕೆಯನ್ನ ಕ್ವಾರಂಟೈನ್​ ಕೇಂದ್ರಕ್ಕೆ ಕರೆದೊಯ್ದಿದ್ದಾನೆ.

ಕೊರೊನಾದ ಮಾರ್ಗಸೂಚಿಯಂತೆ ದಂಪತಿ ಮಾಸ್ಕ್​​ ಧರಿಸಿ ಸಾಮಾಜಿಕ ಅಂತರ ಕಾಪಾಡಲು ನಿರ್ಧರಿಸಿದ್ದಾರೆ. ಜೀಪ್​ನ ಹಿಂಭಾಗಕ್ಕೆ ಟ್ರೇಲರ್​ನ್ನು ಜೋಡಿಸಲಾಗಿತ್ತು. ಟ್ರೇಲರ್​ನ ಮೇಲೆ ನೀಲಿ ಬಣ್ಣದ ಖುರ್ಚಿಯನ್ನ ಇಡಲಾಗಿತ್ತು. ಪತಿ ಜೀಪನ್ನ ಚಲಾಯಿಸಿದ್ರೆ ಪತ್ನಿ ಹಿಂದಿನ ನೀಲಿ ಬಣ್ಣದ ಕುರ್ಚಿ ಮೇಲೆ ಕುಳಿತಿದ್ದಾಳೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸಾಕಷ್ಟು ಫನ್ನಿ ಕಮೆಂಟ್​ಗಳ ಜೊತೆಯಲ್ಲಿ ನೆಟ್ಟಿಗರು ಮಹಿಳೆ ಬೇಗನೆ ಕೊರೊನಾದಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

https://www.facebook.com/auztynn.shimray.9/videos/544354626972381/?t=0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...