ಗಗನಯಾತ್ರಿಗಳಿಗೆ ತರಬೇತಿ ಕೊಡಲು ನೆರವಾಗಲೆಂದು ಜಗತ್ತಿನ ಅತಿ ದೊಡ್ಡ ಈಜುಕೊಳವನ್ನು ಬ್ರಿಟನ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಕಾರ್ನ್‌ವಾಲ್‌ನಲ್ಲಿ ನಿರ್ಮಿಸಲಾಗುವ ಈ ಕೊಳವನ್ನು ಪರ್ಯಾವರಣ ತರಬೇತಿ ಕೇಂದ್ರವಾದ ಬ್ಲೂ ಅಬಿಸ್‌ನ ಅಂಗಳದಲ್ಲಿ ಕಟ್ಟಲಾಗುವುದು.
ಗಗನಯಾತ್ರಿಗಳ ತರಬೇತಿಯೊಂದಿಗೆ, ರಕ್ಷಣಾ ಸಿಬ್ಬಂದಿ, ನೌಕಾಯಾನ, ಕಡಲಾಳದ ಇಂಧನ ಶೋಧನೆ ಸೇರಿದಂತೆ ಅನೇಕ ಉದ್ದೇಶಗಳಿಗೆ ತರಬೇತಿ ನೀಡಲೆಂದು ಈ ಕೊಳವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
42,000 ಕ್ಯೂಬಿಕ್ ಮೀಟರ್ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಈ ಕೊಳವು ಒಲಿಂಪಿಕ್ ಗಾತ್ರವಿರುವ 17 ಕೊಳಗಳಷ್ಟು ದೊಡ್ಡದಿರಲಿದೆ. ಬ್ಲೂ ಅಬಿಸ್‌ನ ಕೇಂದ್ರಭಾಗದಲ್ಲಿ 50ಮೀ x 40ಮೀ ಕೊಳವಿರಲಿದ್ದು, 50ಮೀ ಆಳವಿರಲಿದೆ. ಈ ಸೌಲಭ್ಯದಿಂದ 160 ಉದ್ಯೋಗಗಳು ಸೃಷ್ಟಿಯಾಗಲಿದ್ದು ವಾರ್ಷಿಕ ಎಂಟು ಮಿಲಿಯನ್ ಪೌಂಡ್‌ಗಳಷ್ಟು ಆದಾಯ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.