alex Certify ಪೈಲಟ್​ ರಹಿತ ವಿಮಾನ ತಂತ್ರಜ್ಞಾನ ಆವಿಷ್ಕರಿಸಿದ ಸ್ಟಾರ್ಟಪ್​ ಕಂಪನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಲಟ್​ ರಹಿತ ವಿಮಾನ ತಂತ್ರಜ್ಞಾನ ಆವಿಷ್ಕರಿಸಿದ ಸ್ಟಾರ್ಟಪ್​ ಕಂಪನಿ..!

ಅಮೆರಿಕದ ಸ್ಟಾರ್ಟಪ್​ ಕಂಪನಿಯಾದ ಮೆರ್ಲಿನ್​ ಲ್ಯಾಬ್ಸ್ ವಿಮಾನಯಾನದಲ್ಲಿ ಹೊಸ ಬಗೆಯ ಸಾಫ್ಟ್​ವೇರ್​ ಒಂದನ್ನ ಅಭಿವೃದ್ಧಿಪಡಿಸಿದೆ. ಪೈಲಟ್​ ಸಹಾಯವಿಲ್ಲದ ಸಣ್ಣ ವಿಮಾನ ಹಾರಾಡುವಂತೆ ಮಾಡಲು ಇದು ಯೋಜನೆಯನ್ನ ರೂಪಿಸಿದೆ. ಈ ಯೋಜನೆಯು ಮುಂದಿನ ದಿನಗಳಲ್ಲಿ ವಾಣಿಜ್ಯ ವಿಮಾನ ವಿಭಾಗದಲ್ಲಿ ಹೊಸ ಕ್ರಾಂತಿಯನ್ನ ಹುಟ್ಟು ಹಾಕುವ ಸಾಧ್ಯತೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಮೆರ್ಲಿನ್​ ಲ್ಯಾಬ್​​ ಡೈನಾಮಿಕ್​ ಏವಿಯೆಷನ್​ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನೂ ಹೆಸರಿಡದ ಏರ್​ಕ್ರಾಫ್ಟ್​ ತಂತ್ರಜ್ಞಾನವನ್ನ ಅಭಿವೃದ್ಧಿ ಮಾಡುತ್ತಿದೆ.

ಈ ಪೈಲಟ್​ ಇಲ್ಲದ ವಿಮಾನವು ಸಂಪೂರ್ಣ ಡಿಜಿಟಲೀಕರಣ ರೂಪದಲ್ಲಿ ಕಾರ್ಯನಿರ್ವಹಿಸಲಿದೆ. ಡೈನಾಮಿಕ್​ ಏವಿಯೇಷನ್​ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಈ ಸ್ಟಾರ್ಟಪ್​ ಕಂಪನಿಯು ತನ್ನ ಸ್ವಾಯತ್ತ ಹಾರಾಟ ತಂತ್ರಜ್ಞಾನವನ್ನ ಬೀಚ್​ಕ್ರಾಫ್ಟ್ ಕಿಂಗ್​ ವಿಮಾನಗಳಿಗೆ ಪೂರೈಸಲಿದೆ. ಕ್ಯಾಲಿರ್ಫೋನಿಯಾದ ಮೊಜಾವೆ ಏರ್​ ಹಾಗೂ ಸ್ಪೇಸ್​ ಪೋರ್ಟ್ ಮೂಲಕ ಮೆರ್ಲಿನ್​ ಲ್ಯಾಬ್ಸ್ ಈಗಾಗಲೇ ಪರೀಕ್ಷಾ ಹಾರಾಟ ನಡೆಸುತ್ತಿದೆ.

ಈ ಸಂಪೂರ್ಣ ರಿಮೋಟ್​ ಕಂಟ್ರೋಲ್​ ಮೂಲಕವೇ ವಿಮಾನ ಹಾರಾಟ ನಡೆಸುವ ತಂತ್ರಜ್ಞಾನ ಇದಾಗಿದೆ. ಈ ರಿಮೋಟ್​ ಕಂಟ್ರೋಲ್​ ಮಾಡುವವರೇ ವಿಮಾನದ ಮೇಲ್ವಿಚಾರಣೆ ಹಾಗೂ ಹಾರಾಟದ ಜವಾಬ್ದಾರಿಯನ್ನ ಹೊಂದಿರುತ್ತಾರೆ ಎಂದು ಕಂಪನಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...