alex Certify ತಣ್ಣನೆ ಆಹಾರದ ಕುರಿತಾಗಿ ಅಧ್ಯಯನದಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಣ್ಣನೆ ಆಹಾರದ ಕುರಿತಾಗಿ ಅಧ್ಯಯನದಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ

ಆಹಾರವು ಬಿಸಿಯಾಗಿದೆಯೋ ಅಥವಾ ತಣ್ಣಗಿದೆಯೋ ಅನ್ನೋದರ ಮೇಲೆ ನಾವೆಷ್ಟು ತಿನ್ನುತ್ತೇವೆ ಎಂಬುದು ಅವಲಂಬಿತವಾಗಿದೆ ಎಂದು ಫ್ರಾನ್ಸ್​​ನ ಅಧ್ಯಯನವೊಂದು ಹೇಳಿದೆ.

ಕ್ಯಾಲೋರಿ ಅಂಶವು ನಾವು ಸೇವಿಸುವ ಆಹಾರದ ತಾಪಮಾನದ ಮೇಲೆ ಅವಲಂಭಿಸಿರುತ್ತೆ. ಈ ಅಧ್ಯಯನದ ಪ್ರಕಾರ ನಾವು ತಣ್ಣನೆಯ ಆಹಾರಕ್ಕಿಂತ ಬಿಸಿಯಾದ ಆಹಾರದಲ್ಲೇ ಹೆಚ್ಚು ಕ್ಯಾಲೋರಿ ಇದೆ ಎಂದು ಭಾವಿಸಿದ್ದೇವೆ. ಆದರೆ ತಣ್ಣನೆಯ ಆಹಾರವನ್ನ ಆಯ್ಕೆ ಮಾಡಿಕೊಳ್ಳುವವರು ಕ್ಯಾಲೋರಿ, ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್​ನ್ನು ಹೆಚ್ಚಾಗಿ ಸೇವಿಸುತ್ತಾರೆ ಎಂದು ತಿಳಿದು ಬಂದಿದೆ.

ನಮ್ಮ ಮೆದುಳು ಹೀಗೆಕೆ ವರ್ತಿಸುತ್ತದೆ ಎಂದು ತಿಳಿಯಲು ಗ್ರೇನೊಬಲ್​ ಎಕೋಲ್​ ಡೀ ಮ್ಯಾನೆಜ್​ಮೆಂಟ್​ನ ಮೂವರು ಸಂಶೋಧಕರು ಫ್ರೆಂಚ್​, ಅಮೆರಿಕ ಹಾಗೂ ಬ್ರೆಜಿಲ್​ನ 2600 ಮಂದಿಯ ಮೇಲೆ ಸಮೀಕ್ಷೆ ನಡೆಸಿದ್ರು.

ಬೆಚ್ಚಗಿನ ಆಹಾರವನ್ನ ಸಾಮಾನ್ಯವಾಗಿ ಮುಖ್ಯ ಆಹಾರದ ಕ್ರಮದಲ್ಲಿ ಸೇವಿಸುತ್ತೇವೆ. ಅಲ್ಲದೇ ಬೆಚ್ಚಿಗಿನ ಆಹಾರಗಳು ಬೇಗನೇ ಜೀರ್ಣವಾಗುತ್ತವೆ. ಜನರು ಬೆಚ್ಚಗಿನ ಆಹಾರದಲ್ಲಿ ಹೆಚ್ಚಾಗಿ ಸ್ವಾದವನ್ನ ಅರಸುತ್ತಾರೆ ಎಂದು ಅಮಾಂದಾ ಪ್ರುಸ್ಕಿ ಯಾಮಿನ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...